FIRST TERM EXAMINATION WILL BE STARTING FROM 21ST OF THIS MONTH.......

Tuesday 3 March 2015

ಮುಂಡಿತ್ತಡ್ಕ ;   ಶಾಲಾ ವಾರ್ಷಿಕೋತ್ಸವ ಹಾಗೂ  ವಿದಾಯ  ಸಮಾರಂಭ

ತಾ . ೨೮-೦೨-೨೦೧೫ ನೇ  ಶನಿವಾರ ಶ್ರೀ ಮಂಜಯ್ಯ ಮೆಮೋರಿಯಲ್ ಎ . ಯು . ಪಿ .ಶಾಲೆ ಮುಂಡಿತ್ತಡ್ಕದ  ವಾರ್ಷಿಕೋತ್ಸವವು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ  ವಿಜ್ರಂಭಣೆಯಿಂದ  ಜರಗಿತು .  ಪಿ . ಟಿ . ಎ . ಅಧ್ಯಕ್ಷರಾದ  ಶ್ರೀ  ಸಂತೋಷ್ ಕುಮಾರ್ ರವರು ಧ್ವಜಾರೋಹಣ  ಗೈದರು . ಬಳಿಕ ಅವರ ಅಧ್ಯಕ್ಷತೆಯಲ್ಲಿ  ಜರಗಿದ  ಸಭಾ ಕಾರ್ಯಕ್ರಮವನ್ನು  ವಾರ್ಡ್  ಸದಸ್ಯೆ ಶ್ರೀಮತಿ  ಬುಶ್ರಾ  ಸಿದ್ದಿಕ್ ರವರು ದೀಪ  ಬೆಳಗಿಸಿ  ಉದ್ಘಾಟಿಸಿದರು . ಮುಖ್ಯ  ಶಿಕ್ಷಕಿ  ಪದ್ಮಾವತಿಯವರು  ವರದಿಯನ್ನು  ವಾಚಿಸಿದರು .  ಮುಖ್ಯ ಅತಿಥಿಗಳಾಗಿ  ಕಾಸರಗೋಡು ಜಿಲ್ಲಾ  ವಿದ್ಯಾಧಿಕಾರಿಗಳಾದ ಶ್ರೀ  ಸದಾಶಿವ  ನಾಯಕ್  ಹಾಗೂ ಕುಂಬಳೆ  ಉಪಜಿಲ್ಲಾ  ವಿದ್ಯಾಧಿಕಾರಿ ಗಳಾದ  ಶ್ರೀ ಕೈಲಾಸ  ಮೂರ್ತಿಯವರು  ಉಪಸ್ಥಿತರಿದ್ದರು .  ಈ  ಸಂದರ್ಭದಲ್ಲಿ   ಶಾಲಾ  ಸಿಬ್ಬಂದಿಯಾದ  ಶ್ರೀ  ಪಿ . ಸುಂದರ ಪುರುಷ ರವರಿಗೆ ವಿದಾಯ ಕೋರಲಾಯಿತು . ಸಮಾರಂಭದಲ್ಲಿ  ಶ್ರೀ ಯಸ್. ನಾರಾಯಣ[ಸದಸ್ಯರು, ಪುತ್ತಿಗೆ ಗ್ರಾಮ ಪಂಚಾಯತು] ಶ್ರೀ ಜೋನಿ ಕ್ರಾಸ್ತ [ಸದಸ್ಯರು,ಬದಿಯಡ್ಕ ಗ್ರಾಮ ಪಂಚಾಯತು], ಶ್ರೀ ಪಿ. ಜನಾರ್ದನ[ಶಾಲಾ ವ್ಯವಸ್ಥಾಪಕರು], ಶ್ರೀಮತಿ ಯನ್.  ವಿಜಯಲಕ್ಷ್ಮಿ[ನಿವ್ರತ್ತ ಮುಖ್ಯ ಶಿಕ್ಷಕಿ], ಶ್ರೀ ಕೆ. ಯಚ್. ಜನಾರ್ಧನ ನಾಯಕ್[ನಿವ್ರತ್ತ ಶಿಕ್ಷಕರು],  ಶ್ರೀಮತಿ ಯಂ. ಕಮಲಾಕ್ಷಿ[ನಿವೃತ್ತ ಮುಖ್ಯ ಶಿಕ್ಷಕಿ], ಶ್ರೀ ಸಂತೋಷ್ ಕುಮಾರ್[ಪಿ. ಟಿ.ಎ. ಅಧ್ಯಕ್ಷರು] ,ಶ್ರೀ ಯಸ್.ಉದಯಭಾನು[ಸ್ಟಾಫ್ ಸೆಕ್ರಟರಿ] ಶುಭಾಶಂಸನೆಗೈದರು.                                                                                                                       ಶಾಲಾ ಅಧ್ಯಾಪಕರಾದ ಶ್ರೀ ಗಣೇಶ್ ಕಾಮತ್ ರವರು ಸ್ವಾಗತಿಸಿ, ಶ್ರೀ ವಿಜಯಕುಮಾರ್ ಕೆ. ವಿ. ವಂದಿಸಿದರು. ಶಿಕ್ಷಕರಾದ ಉಮಾನಾಥ ಭಂಡಾರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು. 

 

  ಮುಖ್ಯ  ಶಿಕ್ಷಕಿಯವರು   ಶಾಲಾ  ವಾರ್ಷಿಕ ವರದಿಯನ್ನು ವಾಚಿಸುತ್ತಿರುವುದು ... 

  ಸಭಾಧ್ಯಕ್ಷ  ಸ್ಥಾನದಿಂದ ಭಾಷಣ ಮಾಡುತ್ತಿರುವ  ಪಿ ಟಿ  ಎ ಅಧ್ಯಕ್ಷರು  ... 

  ಸುದೀರ್ಘ ಕಾಲ ಶಾಲಾ  ಸಿಬಂದಿಯಾಗಿ  ಸೇವೆ ಸಲ್ಲಿಸಿದ  ಶ್ರೀಯುತ  ಸುಂದರ 

ಪುರುಷರವರು  ಶಾಲೆಗೆ  ಉದಾರವಾಗಿ  ಕೊಡುಗೆ  ನೀಡುತ್ತಿರುವುದು ...  

  ಮಕ್ಕಳ  ವಿವಿಧ  ರೀತಿಯ ಮನೋರಂಜನಾ ಕಾರ್ಯಕ್ರಮಗಳು ... 

 

 

 

 

 

ಮನರಂಜಿಸಿದ  ತರಕಾರಿ   ಸಂಗೀತ  ಕಛೇರಿ ...



ವಿವಿಧ  ಸ್ಪರ್ಧೆಗಳಲ್ಲಿ  ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸುತ್ತಿರುವುದು  ....