FIRST TERM EXAMINATION WILL BE STARTING FROM 21ST OF THIS MONTH.......

Thursday 8 March 2018

         സ്‌കൂൾ  വാർഷികോത്സവം  ആചരിച്ചു


  മുണ്ട്യത്തടുക്ക :  ശ്രീ.മഞ്ചയ്യ മെമ്മോറിയൽ എ.യു.പി.സ്‌കൂൾ 

മുണ്ട്യത്തടുക്കയിലെ സ്‌കൂൾ വാർഷികോത്സവം വിവിധ സാംസ്‌കാരിക 

പരിപാടികളോടെ നടന്നു.രാവിലെ കൃത്യം  9.30 ന് പി.ടി.എ. പ്രസിഡണ്ട് 

ശ്രീ.കുഞ്ഞാലി  പതാക ഉയർത്തി.സ്റ്റേജ് പരിപാടികളുടെ അധ്യക്ഷ സ്ഥാനം 

പഞ്ചായത്ത് മെമ്പർ ശ്രീ.അബൂബക്കർ സിദ്ധീഖ് വഹിച്ചു.

                                കുമ്പള  എ.ഇ .ഒ .ശ്രീ .കൈലാസ മൂർത്തി പരിപാടി 

ഉദ്‌ഘാടനം ചെയ്തു .ബി.പി.ഒ .ശ്രീ.കുഞ്ഞികൃഷ്ണൻ  .എൻ ,വി.മുഖ്യാതിഥി 

യായി.സ്‌കൂൾ മാനേജർ ശ്രീ.പി.ജനാർദ്ദന ,മുൻ ഹെഡ്മാസ്റ്റർശ്രീ.ഉമാനാഥ

ഭണ്ഡാരി ,റിട്ടയേർഡ് അധ്യാപകൻ ശ്രീ.സുദാമ ,എം.പി.ടി.എ.പ്രസിഡണ്ട് 

ശ്രീമതി.രേവതി ,സ്റ്റാഫ് സെക്രട്ടറി ശ്രീ.പദ്മനാഭൻ മാസ്റ്റർ മുതലായവർ 

   ആശംസകൾ അർപ്പിച്ചു. സീനിയർ അധ്യാപികയായ ശ്രീമതി.സരസ്വതി 

 വാർഷിക റിപ്പോർട്ട് അവതരിപ്പിച്ചു .സ്കൂൾ ഹെഡ്മാസ്റ്റർ ശ്രീ.ഗണേഷ്‌കാമത് 

 സ്വാഗതവും ,ശ്രീ.വിജയകുമാരൻ മാസ്റ്റർ നന്ദിയും പറഞ്ഞു.

                             കേന്ദ്രസർവകലാശാലയിൽ  നിന്നും കമ്പ്യൂട്ടർ സയൻസിൽ 

ഒന്നാംറാങ്ക് നേടിയ സ്‌കൂളിലെ പൂർവ്വ വിദ്യാർത്ഥി ആദിഷ് .എൻ .കെ ,

2016 -17 വർഷത്തെ എസ്.എസ്.എൽ .സി .പരീക്ഷയിൽ എല്ലാ    

വിഷയത്തിലും A +ഗ്രേഡ് നേടിയ അർച്ചന .ജി .എന്നിവരെ ചടങ്ങിൽ

ആദരിച്ചു.  സ്കൂൾ ,സബ്‌ജില്ല ,ജില്ല  തല  മത്സരങ്ങളിൽ മികച്ച പ്രകടനം 

കാഴ്ച വെച്ച കുട്ടികളെയും ആദരിച്ചു.കുട്ടികളുടെ വിവിധ 

കലാപരിപാടികൾ  ചടങ്ങിന് മാറ്റുകൂട്ടി .


Tuesday 16 January 2018

                ಶ್ರದ್ದ- 'ಹಿರಿಮೆಗೊಂದು ಮೆಟ್ಟಿಲು' ಏಕ ದಿನ ವಿಜ್ಞಾನ ಶಿಬಿರ 
                               ಯಸ್ ಎಂ ಎಂ ಎ ಯು ಪಿ ಶಾಲೆ ಮುಂಡಿತ್ತಡ್ಕ  -11356

       ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ಕಲಿಕಾ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳನ್ನು ಲಕ್ಷ್ಯವಾಗಿಟ್ಟು ಜಾರಿಗೊಳಿಸಿರುವ ಶ್ರದ್ದ- ಹಿರಿಮೆಗೊಂದು  ಮೆಟ್ಟಿಲು ಕಾರ್ಯಕ್ರಮದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಏಕ ದಿನ ಶಿಬಿರವು ತಾ:22/12/2017ರಂದು ನಮ್ಮ ಶಾಲೆಯಲ್ಲಿ ನಡೆಯಿತು.
    ಶಿಬಿರದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾರಾದ ಶ್ರೀ ಗಣೇಶ ಕಾಮತ್ ರವರು ನೆರವೇರಿಸಿ 'ಪ್ರಕೃತಿಯ ನಿರೀಕ್ಷಣೆಯಿಂದಲೇ ನಮಗೆ  ವೈಜ್ಞಾನಿಕವಾಗಿ ವಿಶ್ಲೇಷಿಸಿ ನಿಗಮನಕ್ಕೆ ತಲುಪುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಸಾಧ್ಯ ' ಎಂದು ತಿಳಿಸಿದರು.
   ನಂತರ ಅಧ್ಯಾಪಕರಾದ ಪದ್ಮನಾಭ ನಾಯಕ್ ಮತ್ತು ವಿಜಯಕುಮಾರನ್ ಕೆ ವಿ ಅವರು ಆಟಗಳ ಮೂಲಕ ವಿವಿಧ ವಿಜ್ಞಾನ ಚಟುವಟಿಕೆಗಳನ್ನು ನಡೆಸಿದರು. ಕಲಿಕೆಯಲ್ಲಿ ಹಿಂದುಳಿದ 5ನೆಯ ತರಗತಿಯ 26ಮಕ್ಕಳು ಚಟುವಟಿಕೆಯಲ್ಲಿ ಭಾಗವಹಿಸಿದರು. ವಿವಿಧ ಹಣ್ಣುಗಳನ್ನು ಬಟ್ಟೆಯ ಚೀಲದಲ್ಲಿ ಕಟ್ಟಿ ಚೀಲಗಳನ್ನು ಮುಟ್ಟಿ ನೋಡಿ ,ಮೂಸಿ ನೋಡಿ, ತೆರೆದು ರುಚಿ ನೋಡಿ ಪತ್ತೆ ಹಚ್ಚುವ ಚಟುವಟಿಕೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
   ಮಧ್ಯಾಹ್ನ  ನಂತರ ಮಕ್ಕಳು ತಮಗೆ ಲಭಿಸಿದ ಹಣ್ಣುಗಳ ಕುರಿತು ವಿವರಣೆ ನೀಡುವುದು, ಚಿತ್ರ ಬಿಡಿಸಿ ಹೆಸರು ಬರೆಯುವುದು, ಪದಸೂರ್ಯ ರಚಿಸುವುದು ಮೊದಲಾದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದರು . ಮಕ್ಕಳು ತಮ್ಮ ಅನುಭವಗಳನ್ನು ಪುಸ್ತಕದಲ್ಲಿ ದಾಖಲಿಸಿದರು. ಅಧ್ಯಾಪಿಕೆಯರಾದ ಸಾವಿತ್ರಿ ಪಿ ವಿ ಎಂ,ಉಷಾ ವಿ ವಿ ,ಗಂಗಾ ನೀರಜ್ ,ರುಗ್ಮಿನಿ ಮತ್ತು ಅಧ್ಯಾಪಕರಾದ ಪದ್ಮನಾಭ ನಾಯಕ್ ಮತ್ತು ಪ್ರಶಾಂತ್ ರೈ ಯವರು ಚಟುವಟಿಕೆಗಳನ್ನು ನಡೆಸಲು ಸಹಕರಿಸಿದರು.



Monday 15 January 2018

     ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾ ಯಜ್ಞದ ಅಂಗವಾಗಿ ರಕ್ಷಕರಿಗೆ ತಿಳುವಳಿಕಾ 

                               ಯಸ್ ಯಂ ಯಂ ಎ ಯು ಪಿ ಶಾಲೆ ಮುಂಡಿತ್ತಡ್ಕ-11356 

        ಮುಂಡಿತ್ತಡ್ಕ :ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾ ಯಜ್ಞದ ಅಂಗವಾಗಿ ರಕ್ಷಕರಿಗೆ ಮಾಹಿತಿ

ಶಿಬಿರವು ತಾ :೧೫. ೦೧. ೨೦೧೮ ನೇ ಸೋಮವಾರದಂದು ಶಾಲೆಯಲ್ಲಿ ಜರಗಿತು . ಕಾರ್ಯಕ್ರಮದ

ಉದ್ಘಾಟನೆಯನ್ನು ಜನಾರ್ದನ ಮಾಸ್ಟರ್( ಶಾಲಾ ಮ್ಯಾನೆಜರ್) ನೆರವೇರಿಸಿದರು. PTA

ಉಪಾಧ್ಯಕ್ಷರಾದ  ಮೊಇದೀನ್ ಕುಟ್ಟಿಯವರು ಸಭಾಧ್ಯಕ್ಷತೆ ವಹಿಸಿದರು. BRC Triner ಶ್ರೀಮತಿ ಶ್ರುತಿ

,PTA ಸದಸ್ಯರಾದ ಪುರುಷೋತ್ತಮ ಎರ್ಮೆತೊಟ್ಟಿ ,MPTA ಅಧ್ಯಕ್ಷೆ ಶ್ರೀಮತಿ ರೇವತಿ

ಎಂ ಮೊದಲಾದವರು ಶುಭ ಹಾರೈಸಿದರು . ಪ್ರಶಾಂತ್ ರೈ ಮಾಸ್ಟರ್ ರವರು ತರಗತಿ ನಡೆಸಿದರು .

ಮುಖ್ಯೋಪಾದ್ಯಾಯರಾದ  ಗಣೇಶ್ ಕಾಮತ ರವರು ಸ್ವಾಗತಿಸಿ ,ಶಿಕ್ಷಕಿ ರುಕ್ಮಿಣಿ ಪಾಡಪ್ಪಾಯಿಲ್

ರವರು ವಂದಿಸಿದರು. ಸಂತೋಷ್ ಕುಮಾರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.