FIRST TERM EXAMINATION WILL BE STARTING FROM 21ST OF THIS MONTH.......

Friday 23 June 2017

                                  ಗ್ಯಾಸ್ ಸ್ಟವ್ ಉದ್ಘಾಟನೆ 

   


   


             



 . ಶ್ರೀ ಮಂಜಯ್ಯ ಸ್ಮಾರಕ ಎ ಯು ಪಿ ಶಾಲೆ ಮುಂಡಿತ್ತಡ್ಕದಲ್ಲಿ

ತಾ:15-06-2017ರಂದು ಅಡುಗೆ

ಅನಿಲ ಸಂಪರ್ಕ ಯೋಜನೆ ಯನ್ನು ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ

ಟೀಚರವರು ಹಾಲನ್ನು ಬಿಸಿ ಮಾಡುವ ಮೂಲಕ ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ

ಜನಾರ್ದನ ಮಾಸ್ಟರ್ ,ಎಂ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ರೇವತಿ ,ಮುಖ್ಯೋಪಾಧ್ಯಾಯರಾದ ಶ್ರೀ

ಗಣೇಶ್ ಕಾಮತ್,ಅಡುಗೆಯವರಾದ ಶ್ರೀಮತಿ ಪಾರ್ವತಿ ಉಪಸ್ಥಿತರಿದ್ದರು. ಗಣೇಶ್ ಕಾಮತ್ ರವರು

ಸ್ವಾಗತಿಸಿ ಸ್ಟಾಫ್ ಸೆಕ್ರಟರಿ ಪದ್ಮನಾಭ ಮಾಸ್ಟರ್ ಧನ್ಯವಾದ ಅರ್ಪಿಸಿದರು

Wednesday 21 June 2017

 ವಿಶ್ವ ಯೋಗ ದಿನಾಚರಣೆ

 

ವಿಶ್ವಯೋಗ ದಿನಾಚರಣೆಯ ಅಂಗವಾಗಿ ಶಿಕ್ಷಕ ದಾಮೋದರ ಮಾಸ್ತರ್ ರವರು ಸೂರ್ಯ ನಮಸ್ಕಾರದ ವಿವಿಧ ಹಂತಗಳನ್ನು ತಿಳಿಯಪಡಿಸಿದರು . .







 


Monday 5 June 2017

ವಿಶ್ವ ಪರಿಸರ ದಿನ 

                                     ಜೂನ್  5  ರಂದು  ನಮ್ಮ ಶಾಲಾ ವಠಾರದಲ್ಲಿ ಶಾಲಾ ವ್ಯವಸ್ಥಾಪಕರು , ಅಧ್ಯಾಪಕರು, ವಿದ್ಯಾರ್ಥಿಗಳಿಂದ   ಹಲವು  ಗಿಡಗಳನ್ನು ನೆಡಲಾಯಿತುಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ವ್ಯವಸ್ಥಾಪಕರಾದ  ಪಿ ಜನಾರ್ದನ ರವರು ನೆರವೇರಿಸಿದರು.



Thursday 1 June 2017

  ಮುಂಡಿತ್ತಡ್ಕ  ಶಾಲಾ  ಪ್ರವೇಶೋತ್ಸವ
                   

ಮುಂಡಿತ್ತಡ್ಕ : ಶ್ರೀ ಮಂಜಯ್ಯ ಮೆಮೋರಿಯಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 2017-2018 ನೇ ಶಾಲಾ ಅಧ್ಯಯನ ವರ್ಷದ ಪ್ರವೇಶೋತ್ಸವವು ಬಹಳವಿಜೃಂಭಣೆಯಿಂದ ಜರಗಿತು .
ಚೆಂಡೆವಾದ್ಯಗಳ ಮೇಳದೊಂದಿಗೆವಿದೂಷಕಮುಖವಾಡ ಧರಿಸಿದವಿದ್ಯಾರ್ಥಿಗಳು ಆಕರ್ಷಕವಾಗಿಕುಣಿಯುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದರು .



 

ಹೊಸದಾಗಿ ಶಾಲೆಗೆ ಸೇರಿದ ಪುಟಾಣಿಗಳಿಗೆ ಬಣ್ಣಬಣ್ಣದಪುಗ್ಗೆಗಳನ್ನು ,ಬಣ್ಣ - ಬಣ್ಣದಟೊಪ್ಪಿಗಳನ್ನು ನೀಡಿ ಅಧ್ಯಾಪಿಕೆಯರು ಸ್ವಾಗತಿಸಿದರು

 



ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ .ಎ ಅಧ್ಯಕ್ಷರಾದ ಶ್ರೀ ಕುಂಞಲಿ ರವರು ಅಧ್ಯಕ್ಷತೆ ಯನ್ನುವಹಿಸಿದ್ದರು .




 



ವಾರ್ಡ್ ಸದಸ್ಯರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

ಶಾಲಾ ವ್ಯವಸ್ಥಾಪಕರಾದ ಶ್ರೀ ಪಿ ಜನಾರ್ದನ ಮಾಸ್ಟರ್ ರವರು , ಶ್ರೀ ಮತಿ ರೇವತಿ (ಯಂ ಪಿ ಟಿ ಎ ಶ್ರೀ ಅಧ್ಯಕ್ಷೆ),ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಉಮಾನಾಥ ಭಂಡಾರಿ , ನಿವೃತ್ತ ಶಿಕ್ಷಕ ಸುದಾಮ ಮಾಸ್ತರ್ ಶುಭಾಶಂಸನೆ ಗೈದರು. ಮಕ್ಕಳು ಉತ್ಸಾಹದಿಂದ ಪ್ರವೇಶೋತ್ಸವ
ಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ಒಂದನೆಯ ತರಗತಿ ಮತ್ತು ಎಲ್. ಕೆ.ಜಿ. ವಿದ್ಯಾರ್ಥಿಗಳಿಗೆ ಶಾಲಾಸಂಸ್ಥಾಪಕರ ಸ್ಮರಣಾರ್ಥವಾಗಿ ಉಚಿತ ಬ್ಯಾಗು ಗಳನ್ನು ವಿತರಿಸಲಾಯಿತು .







ಶಾಲಾ ಮುಖ್ಯ ಶಿಕ್ಷಕ ಗಣೇಶ ಕಾಮತ್ ರವರು ಸ್ವಾಗತಿಸಿ, ವಿಜಯಕುಮಾರ್ ಕೆ. ವಿ ವಂದಿಸಿದರು . ಪದ್ಮನಾಭ ಮಾಸ್ಟರ್ ರವರು ಕಾರ್ಯಕ್ರಮವನ್ನು ನಿರೂ ಪಿಸಿದರು
ಸಮಾರಂಭದ ಕೊನೆಯಲ್ಲಿ ಎಲ್ಲರಿಗೂ ಸಿಹಿತಿಂಡಿ ಯನ್ನು  ವಿತರಿಸಲಾಯಿತು .