FIRST TERM EXAMINATION WILL BE STARTING FROM 21ST OF THIS MONTH.......

Wednesday 27 July 2016

P.T.A. MEETING ON 27-07-2016

ರಕ್ಷಕ ಶಿಕ್ಷಕ  ಮಹಾಸಭೆ 

                     ಮುಂಡಿತ್ತಡ್ಕ :   ಮುಂಡಿತ್ತಡ್ಕ ಶ್ರೀ ಮಂಜಯ್ಯ ಸ್ಮಾರಕ ಎ. ಯು . ಪಿ ಶಾಲೆಯ  ಈ ಶೈಕ್ಷಣಿಕ ವರ್ಷದ ರಕ್ಷಕ -ಶಿಕ್ಷಕ  ಸಂಘದ  ಮಹಾಸಭೆಯು  ತಾ :27.07.16ನೇ ಬುಧವಾರ ಅಪರಾಹ್ನ 2  ಘಂಟೆಗೆ ಸರಿಯಾಗಿ ಪಿ . ಟಿ . ಎ ಅಧ್ಯಕ್ಷ  ಶ್ರೀ ಸಂತೋಷ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು . ಸಭೆಯನ್ನು   ಔಪಚಾರಿಕವಾಗಿ  ಉದ್ಘಾಟಿಸುತ್ತಾ  ಮಾತನಾಡಿದ   ಪಂಚಾಯತು  ಸದಸ್ಯ  ಶ್ರೀ  ಅಬೂಬಕ್ಕರ್  ಸಿದ್ದಿಕ್   ಅವರು  "ಮಕ್ಕಳ  ಅಭಿವೃದ್ಧಿಯ  ಜತೆಗೆ  ಶಾಲೆಯ  ಅಭಿವೃದ್ಧಿಯು  ಸಾಧ್ಯ .  ಶಾಲೆಯ  ಎಲ್ಲಾ  ಕಾರ್ಯ ಚಟುವಟಿಕೆಯಲ್ಲೂ  ಹೆತ್ತವರ   ಪಾಲು   ಬಲು ಮುಖ್ಯ .  ಅದಕ್ಕಾಗಿ ಎಲ್ಲಾ  ಕಾರ್ಯಕ್ರಮದಲ್ಲೂ  ಹೆತ್ತವರು  ಪಾಲ್ಗೊಳ್ಳಬೇಕು . ಶಾಲೆಯ  ಸರ್ವತೋಮುಖ  ಅಭಿವೃದ್ಧಿಗೆ  ಪಾತ್ರರಾಗಬೇಕು  ಎಂದರು .                           

               ಶಾಲಾ   ವ್ಯವಸ್ಥಾಪಕರಾದ  ಶ್ರೀಯುತ  ಜನಾರ್ದನ  ಮಾಸ್ಟರ್ ಅವರು  "ಇಂದಿನ  ಸ್ಪರ್ಧಾತ್ಮಕ  ಯುಗದಲ್ಲಿ  ನಮ್ಮ ಶಾಲೆಯನ್ನು ಉಳಿಸಿ  ಬೆಳೆಸುವುದು  ತಮ್ಮೆಲ್ಲರ ಕರ್ತವ್ಯ . ಅದಕ್ಕಾಗಿ  ಶಾಲೆಯಲ್ಲಿ  ಹಮ್ಮಿಕೊಂಡ  ಪ್ರತೀ ಚಟುವಟಿಕೆಯನ್ನೂ  ಯಶಸ್ವಿಯಾಗಿ  ನಿರ್ವಹಿಸಲು ಹೆತ್ತವರು  ಸಹಕರಿಸಬೇಕೆಂದು  ತಿಳಿಸಿದರು . ಎಂ . ಪಿ .ಟಿ .ಎ  ಅಧ್ಯಕ್ಷೆ ಶ್ರೀಮತಿ  ಚಂದ್ರಿಕಾ ಅವರು ಶುಭ ಹಾರೈಸಿದರು . ಅಧ್ಯಾಪಕರಾದ ಶ್ರೀ ಪದ್ಮನಾಭ  ನಾಯಕ್ ರವರು ತಮ್ಮ ಪ್ರಾಸ್ತಾವಿಕ  ಭಾಷಣದಲ್ಲಿ  ಶಾಲೆಯಲ್ಲಿ  ಈ   ವರ್ಷ  ಕೈಗೊಳ್ಳುವ ಚಟುವಟಿಕೆಗಳ ಕುರಿತು  ತೀರ್ಮಾನಗಳ ಕುರಿತು ಸವಿವರವಾಗಿ ವಿವರಿಸಿದರು .  ಸಭೆಯಲ್ಲಿ ನೂತನ ವರ್ಷದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ  ಮಾಡಲಾಯಿತು . ಪಿ ಟಿ ಎ ಅಧ್ಯಕ್ಷರಾಗಿ ಶ್ರೀ ಕುಂಞಲಿ  ಎಂ ಪಿ ಟಿ ಎ ಅಧ್ಯಕ್ಷೆಯಾಗಿ ಶ್ರೀಮತಿ ರೇವತಿ ಯಂ  ಅವರು ಅವಿರೋದವಾಗಿ ಆಯ್ಕೆಯಾದರು . ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶಾಲಾ ವ್ಯವಸ್ಥಾಪಕರ ಹಾಗೂ ಶಾಲಾ  ವತಿಯಿಂದ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು . 
                                                                                                                                                                                     ಅಧ್ಯಾಪಕ ಶ್ರೀ ಗಣೇಶ್ ಕಾಮತ್ ಸ್ವಾಗತಿಸಿ ,ಶ್ರೀ ಸಂತೋಷ್ ಕುಮಾರ್ ವಂದಿಸಿದರು. ಮುಖ್ಯೋಪಾಧ್ಯಾಯರಾದ  ಶ್ರೀ ಉಮಾನಾಥ ಭಂಡಾರಿ ಗತ ವರ್ಷದ ವರದಿ ವಾಚಿಸಿದರು .   


Thursday 21 July 2016

                                            ಚಾಂದ್ರ ದಿನ                                              

                 ಮುಂಡಿತ್ತಡ್ಕ :ಯಸ್ ಯಂ ಯಂ ಎ ಯು ಪಿ ಶಾಲೆಯಲ್ಲಿ ಚಾಂದ್ರದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ವಿಜ್ಞಾನ ಅಧ್ಯಾಪಕರಾದ ಸುದಾಮ ಮಾಸ್ಟರ್ ಮಕ್ಕಳಿಗೆ ಚಾಂದ್ರದಿನದ ಮಾಹಿತಿಯನ್ನು ನೀಡಿದರು. ಅಮೆರಿಕಾ ದೇಶದ ಗಗನ ಯಾತ್ರಿಗಳು ಚಂದ್ರನ ಮೇಲೆ ಮೊತ್ತ ಮೊದಲ ಬಾರಿಗೆ ಕಾಲಿರಿಸಿದ ಬಾಹ್ಯಾಕಾಶ ಚರಿತ್ರೆಯ ಅಪೂರ್ವ ಕ್ಷಣದ ನೆನಪಿಗಾಗಿ ಚಾಂದ್ರದಿನವನ್ನು ಆಚರಿಸಲಾಗುವುದೆಂದು ಅವರು ತಿಳಿಸಿದರು. ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಚಾಂದ್ರದಿನ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಯಿತು. ಚಂದ್ರನ ಮೇಲೆ ನಡೆದ ಸಂಶೋಧನೆಗಳು ಮತ್ತು ಬಾಹ್ಯಾಕಾಶ ಯಾತ್ರೆಗಳ ಕುರಿತಾದ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.                               

ಗಗನ ಯಾತ್ರಿಗಳ  ಚಾರ್ಟ್ ಪ್ರದರ್ಶನ                                                                                                                                          

ರಸ ಪ್ರಶ್ನೆ 


ವಿಜೇತರಾದ ವಿದ್ಯಾರ್ಥಿಗಳು 

ಪ್ರಥಮ :ಕೃಪೇಶ್  ಕುಮಾರ್ 
ದ್ವಿತೀಯ :ನಿರಂಜನ್  ಕೆ ಆರ್ 

                                 




Tuesday 19 July 2016

                      ಚೈಲ್ಡ್  ಹೆಲ್ಪ್ ಲೈನ್ ನಿಂದ ಮಾಹಿತಿ ಕಾರ್ಯಾಗಾರ 












                ಮುಂಡಿತ್ತಡ್ಕ  ಶಾಲೆಯಲ್ಲಿ   ಚೈಲ್ಡ್  ಹೆಲ್ಪ್ ಲೈನ್ ನಿಂದ ಮಾಹಿತಿ ಶಿಭಿರವು ಇತ್ತೀಚೆಗೆ ನೆರವೇರಿತು . ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯ ಶ್ರೀ ಯುತ ಉಮಾನಾಥ ಭಂಡಾರಿಯವರು ನೆರವೇರಿಸಿದರು . ಕಾರ್ಯಕ್ರಮದಲ್ಲಿ ಚೈಲ್ಡ್  ಹೆಲ್ಪ್ ಲೈನಿನ ಕಾರ್ಯವೈಖರಿಯ ಬಗ್ಗೆ ಚೈಲ್ಡ್  ಹೆಲ್ಪ್ ಲೈನಿನ ಕಾರ್ಯಕರ್ತ  ಪದ್ಮನಾಭರವರು ಮಾಹಿತಿಯನ್ನು ನೀಡಿದರು . ವಿದ್ಯಾರ್ಥಿಗಳು ಎದುರಿಸುವ ವಿವಿಧ ಸಮಸ್ಯೆಗಳಾದ ಮಾನಸಿಕ ಹಿಂಸೆ, ದೈಹಿಕ ಹಿಂಸೆ ,ರೋಗದಿಂದ ನರಳುವವರಿಗೆ ನೀಡುವಂತಹ ಸಹಾಯದ ಬಗ್ಗೆ ವಿವರಿಸಿದರು .
              ಶಿಕ್ಷಕ ಪ್ರಶಾಂತ ರೈಯವರು ಸ್ವಾಗತಿಸಿ ವಿಜಯ ಕುಮಾರ್ ಮಾಸ್ಟರ್ ರವರು ವಂದಿಸಿದರು .
  

Monday 11 July 2016

ಸಂಸ್ಥಾಪಕರ ದಿನಾಚರಣೆ

                        

              ಸಂಸ್ಥಾಪಕರ ದಿನಾಚರಣೆ 






 ಮುಂಡಿತ್ತಡ್ಕ : ವಿದ್ಯಾದಾನವೇ  ದೇಶಸೇವೆಯೆಂದು  ಮನಗಂಡು  ಮುಂಡಿತ್ತಡ್ಕವೆಂಬ  ಕುಗ್ರಾಮದಲ್ಲಿ  ಶಾಲೆಯನ್ನು  ಸ್ಥಾಪಿಸಿ ನಿಸ್ವಾರ್ಥ ಸೇವೆಯನ್ನು  ಕೈಗೊಂಡ  ಶ್ರೀ ಮಂಜಯ್ಯ ಮಾಸ್ತರರ  ಚರಮ ದಿನವಾದ  ಜುಲೈ ೧೧ ನ್ನು  ಸಂಸ್ಥಾಪಕರ ದಿನವನ್ನಾಗಿ  ಆಚರಿಸಲಾಯಿತು . ಮಧ್ಯಾಹ್ನ  ೨. ೦೦ ಗಂಟೆಗೆ  ಮೌನ ಪ್ರಾರ್ಥನೆಯೊಂದಿಗೆ  ಆರಂಭವಾದ  ಸಭೆಯನ್ನು ಮುಗು  ಸಹಕಾರಿ  ಬ್ಯಾಂಕಿನ  ಕಾರ್ಯದರ್ಶಿ  ಶ್ರೀ ಶಂಕರ್ ಭಟ್ ರವರು  ದೀಪ  ಬೆಳಗಿಸಿ  ಉದ್ಘಾಟಿಸಿದರು . ಪಂಚಾಯತ್ ಸದಸ್ಯ  ಶ್ರೀ ಸಿದ್ದಿಕ್ ರವರು  ಸಭೆಯ  ಅಧ್ಯಕ್ಷತೆಯನ್ನು  ವಹಿಸಿದರು . ಶಾಲಾ ವ್ಯವಸ್ಥಾಪಕರಾದ  ಶ್ರೀ ಜನಾರ್ದನ ಮಾಸ್ಟರ್ ,ನಿವೃತ ಮುಖ್ಯೋಪಾಧ್ಯಾಯಿನಿ  ವಿಜಯಲಕ್ಷ್ಯ್ಮಿ ಟೀಚರ್ ,ಕಮಲಾಕ್ಷಿ ಟೀಚರ್ , ಪಿ ಟಿ ಎ ಅಧ್ಯಕ್ಷರಾದ  ಸಂತೋಷ್ ಕುಮಾರ್ , MPTA  ಅಧ್ಯಕ್ಷೆ ಚಂದ್ರಿಕಾ , ಸ್ಟಾಫ್ ಸೆಕ್ರಟರಿ  ಗಣೇಶ್ ಕಾಮತ್   ಮುಂತಾದವರು  ಅತಿಥಿಗಳಾಗಿದ್ದು   ಶುಭಾಶಂಸನೆ ಗೈದರು . ಪ್ರತಿವರ್ಷದಂತೆ   ಶಾಲಾ  ವ್ಯವಸ್ಥಾಪಕರ   ವತಿಯಿಂದ  ೧ ನೇ ತರಗತಿಯ  ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು .               ಮುಖ್ಯ  ಶಿಕ್ಷಕ  ಉಮಾನಾಥ ಭಂಢಾರಿಯವರು ಸ್ವಾಗತಿಸಿ , ಶಿಕ್ಷಕ ವಿಜಯಕುಮಾರ್ ವಂದಿಸಿದರು .  ಸುಧಾಮ ಮಾಸ್ಟರ್  ಕಾರ್ಯಕ್ರಮ  ನಿರೂಪಿಸಿದರು.  ಕಾರ್ಯಕ್ರಮದ  ಕೊನೆಯಲ್ಲಿ  ಸಿಹಿತಿಂಡಿಯನ್ನು  ವಿತರಿಸಲಾಯಿತು . 

Wednesday 6 July 2016

ಈದ್     ಹಬ್ಬದ      ಶುಭಾಶಯಗಳು   







Monday 4 July 2016







ಎಣ್ಮಕಜೆ   ಪಿ. ಇ .ಸಿ .ಮಟ್ಟದ  ದ್ವಿದಿನ "  ತುಳು ನಲಿಕೆ  "  ತರಬೇತಿ  ಶಿಬಿರದಲ್ಲಿ    ಭಾಗವಹಿಸಿದ   ಮುಂಡಿತ್ತಡ್ಕ   ಶಾಲೆಯ  ವಿದ್ಯಾರ್ಥಿಗಳು ......