FIRST TERM EXAMINATION WILL BE STARTING FROM 21ST OF THIS MONTH.......

Wednesday 21 December 2016


                  ಕುಂಬಳೆ   ಉಪಜಿಲ್ಲಾ  ಮಟ್ಟದ  ಶಾಲಾ   ಕಲೋತ್ಸವದಲ್ಲಿ   ಉರ್ದು  ಸಮೂಹ  ಗಾನ   ಸ್ಪರ್ಧೆಯಲ್ಲಿ  ಪ್ರಥಮ   ಸ್ಥಾನ  ಗಳಿಸಿ,  ಜಿಲ್ಲಾ  ಮಟ್ಟಕ್ಕೆ  ಆಯ್ಕೆಯಾದ  ಯಸ್. ಎಂ .ಎಂ .ಎ .ಯು .ಪಿ ಮುಂಡಿತ್ತಡ್ಕ  ಶಾಲೆಯ ವಿದ್ಯಾರ್ಥಿಗಳು - ಅಧ್ಯಾಪಕರೊಂದಿಗೆ.... 









Friday 16 December 2016

EDUCATIONAL  TOUR    TO  BEKAL  FORT  AND C.P.C.R.I

Thursday 8 December 2016

ಹರಿತ ಕೇರಳ ವಾರಾಚರಣೆ 

                                                 SMMAUPS MUNDITHADKA

        'ನವಕೇರಳ' ಸೃಷ್ಟಿ ಎಂಬ ಘೋಷಣೆಯೊಂದಿಗೆ ನಾಡಿನ ನೆಲ ಜಲ ಸಂರಕ್ಷಣೆಯ ಮಹತ್ತರವಾದ ಗುರಿಯನ್ನು ಸಾಧಿಸಲು  ಕೇರಳ ಸರಕಾರವು ಜಾರಿಗೊಳಿಸುತ್ತಿರುವ ಹರಿತ ಕೇರಳ ಪದ್ದತಿಯ ಅಂಗವಾಗಿ ನಮ್ಮ ಶಾಲೆಯಲ್ಲಿ ತಾರೀಕು 5.12.2016 ರಿಂದ 8.12.2016ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜಲ ಸಂರಕ್ಷಣೆ,ಪರಿಸರ ಸಂರಕ್ಷಣೆ, ಕೃಷಿ ಅಭಿವೃದ್ಧಿ ಹಾಗು ಪರಿಸರ ಶುಚಿತ್ವದ ಗುರಿಯೊಂದಿಗೆ ಸ್ವಚ್ಛ ಸುಂದರ ಕೇರಳವನ್ನು ಭಾವಿ ಜನಾಂಗಕ್ಕೆ ಉಳಿಸುವ ನಿಟ್ಟಿನಲ್ಲಿ ಕಾರ್ಯಗತಗೊಳಿಸುತ್ತಿರುವ ಹರಿತ ಕೇರಳ ಮಿಷನ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ನಡೆಸಲಾಯಿತು.

               ತಾ 5.12.2016 ರಂದು ಶಾಲಾ ಅಸ್ಸೆಂಬ್ಳಿಯಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಉಮಾನಾಥ ಭಂಡಾರಿಯವರು ಕೇರಳ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹಸಿರು ಕೇರಳ ಯೋಜನೆಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತು ಮೂಡಿಸಲು ತರಗತಿಯಲ್ಲಿ ಮಾಹಿತಿಯನ್ನು ನೀಡಲಾಯಿತು. ಇದರ ಮುಂದುವರಿದ ಚಟುವಟಿಕೆಯ ಭಾಗವಾಗಿ ತಾ. 6.12.2016 ರಂದು ವಿದ್ಯಾರ್ಥಿಗಳಿಗೆ ಪ್ರಬಂಧರಚನಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಪರಿಸರ ಸಂರಕ್ಷಣಾ ದಿನದ ಅಂಗವಾಗಿ ತಾ.7.12.2016ರಂದು ಮಕ್ಕಳಿಗೆ ಚಿತ್ರರಚನಾ ಸ್ಪರ್ಧೆಯನ್ನು ನಡೆಸಲಾಯಿತು.


           ತಾ. 8.12.2016ರಂದು ಶಾಲಾ ಅಸ್ಸೆಂಬ್ಳಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನಾ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಶಾಲಾ ಮುಖ್ಯೋಪಾದ್ಯಾಯರು ಪ್ರತಿಜ್ಞೆಯನ್ನು ಮಕ್ಕಳಿಗೆ ಬೋಧಿಸಿದರು. ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ಟರ್ ಪ್ಲಾಸ್ಟಿಕ್ ಮಾಲಿನ್ಯವು ಉಂಟು ಮಾಡುವ ಪರಿಸರ ಸಮಸ್ಯೆಗಳ ಕುರಿತು ಮಾತಾಡಿದರು.



          ಸಂಜೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸೇರಿ ಪರಿಸರ ಸ್ವಚ್ಛತಾ ಅಭಿಯಾನವನ್ನು ನಡೆಸಿದರು. ಶಾಲಾ ಮುಖ್ಯ ದ್ವಾರದಿಂದ ಮುಖ್ಯ ರಸ್ತೆವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಹರಡಿದ್ದ ಪ್ಲಾಸ್ಟಿಕ್ ಮಾಲಿನ್ಯಗಳನ್ನು ಹೆಕ್ಕಿ ಸ್ವಚ್ಛ ಗೊಳಿಸಲಾಯಿತು