FIRST TERM EXAMINATION WILL BE STARTING FROM 21ST OF THIS MONTH.......

Sunday 23 July 2017


ವಾಚನಾ  ಸಪ್ತಾಹ 






ಶಾಲೆಯಲ್ಲಿ ಕೃಷಿ ಅಭಿವೃದ್ಧಿಯ ಕಾರ್ಯಾಗಾರ


ನಿರಂತರವಾಗಿ ಶಾಲೆಯಲ್ಲಿ ಬೆಳೆಸುವಂತಹ ತರಕಾರಿ ತೋಟ ಈ ವರ್ಷ ಮಳೆಗಾಲ ಆರಂಭದಲ್ಲೇ ಬಿತ್ತನಾ

ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾವ್ಯವಸ್ಥಾಪಕರಾದ ಶ್ರೀ ಯುತ

ಜನಾರ್ದನ ಮಾಸ್ಟರ್ ರವರು ಬೀಜ ಬಿತ್ತುವ ಮೂಲಕನೆರವೇರಿಸಿದರು. ತದನಂತರ ಎಲ್ಲಾ ಸಾಲುಗಳಲ್ಲಿ ಶಿಕ್ಷಕ- ಶಿಕ್ಷಕಿಯರು

ಹಾಗು ವಿದ್ಯಾರ್ಥಿ -ವಿದ್ಯಾರ್ಥಿನಿಯರು ವಿವಿಧ ತರದ ತರಕಾರಿ ಬೀಜ ವಿವಿಧ ತರದ ತರಕಾರಿ ಬೀಜಗಳನ್ನು ಬಿತ್ತಿದರು .









Thursday 20 July 2017

ರಕ್ಷಕ -ಶಿಕ್ಷಕ ಮಹಾಸಭೆ

ಮುಂಡಿತ್ತಡ್ಕ : ಮುಂಡಿತ್ತಡ್ಕ ಶ್ರೀ ಮಂಜಯ್ಯ ಸ್ಮಾರಕ ಎ. ಯು . ಪಿ ಶಾಲೆಯ ಶೈಕ್ಷಣಿಕ ವರ್ಷದ ರಕ್ಷಕ -ಶಿಕ್ಷಕ ಸಂಘದ ಮಹಾಸಭೆಯು ತಾ :20.07.17ನೇ ಗುರುವಾರ ಅಪರಾಹ್ನ 2 ಘಂಟೆಗೆ ಸರಿಯಾಗಿ ಪಿ . ಟಿ . ಎ ಅಧ್ಯಕ್ಷ ಶ್ರೀ ಕುಞಲಿ ಅವರ ಅಧ್ಯಕ್ಷತೆಯಲ್ಲಿ ಜರಗಿತು . ಸಭೆಯನ್ನು ಔಪಚಾರಿಕವಾಗಿ ಉದ್ಘಾಟಿಸುತ್ತಾ ಮಾತನಾಡಿದ ಪಂಚಾಯತು ಸದಸ್ಯ ಶ್ರೀ ಅಬೂಬಕ್ಕರ್ ಸಿದ್ದಿಕ್ ಅವರು

 

"ಮಕ್ಕಳ ಅಭಿವೃದ್ಧಿಯ ಜತೆಗೆ ಶಾಲೆಯ ಅಭಿವೃದ್ಧಿ ಯು ಸಾಧ್ಯ . ಶಾಲೆಯ ಎಲ್ಲಾ ಕಾರ್ಯ ಚಟುವಟಿಕೆಯಲ್ಲೂ ಹೆತ್ತವರ ಪಾಲು ಬಲು ಮುಖ್ಯ. ದಶಕಗಳ ಇತಿಹಾಸ ಹೊಂದಿರುವಂತಹ ನಮ್ಮೀ ಶಾಲೆ, ನಾಡಿನ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗಿದೆ . ಪ್ರಸ್ತುತ ಶಾಲೆಯ ಅಭಿವೃದ್ಧಿಗೆ ನಮ್ಮೆಲ್ಲರ ಪಾತ್ರ ಅನಿವಾರ್ಯವಾಗಿದೆ .ಅದಕ್ಕೆ ಪೂರಕವಾಗಿ ಪಂಚಾಯತು ಆಡಳಿತ ಮಂಡಳಿಯು ಯಾವಾತ್ತೂ ಬೆನ್ನೆಲುಬಾಗಿ ಇರುವುದೆಂದು ಭರವಸೆಯನ್ನು ನೀಡಿದರು .
ಶಾಲಾ ವ್ಯವಸ್ಥಾಪಕರಾದ ಶ್ರೀಯುತ ಜನಾರ್ದನ ಮಾಸ್ಟರ್ ಅವರು

 

"ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಶಾಲೆಯನ್ನು ಉಳಿಸಿ ಬೆಳೆಸುವುದು ತಮ್ಮೆಲ್ಲರ ಕರ್ತವ್ಯ . ಅದಕ್ಕಾಗಿ ಶಾಲೆಯಲ್ಲಿ ಹಮ್ಮಿಕೊಂಡ ಪ್ರತೀ ಚಟುವಟಿಕೆಯನ್ನೂ ಯಶಸ್ವಿಯಾಗಿ ನಿರ್ವಹಿಸಲು ಹೆತ್ತವರು ಸಹಕರಿಸಬೇಕೆಂದು ತಿಳಿಸಿದರು . ಎಂ . ಪಿ .ಟಿ .ಎ ಅಧ್ಯಕ್ಷೆ ಶ್ರೀಮತಿ ರೇವತಿ ಶುಭ ಹಾರೈಸಿದರು . ಅಧ್ಯಾಪಕರಾದ ಶ್ರೀ ಪದ್ಮನಾಭ ನಾಯಕ್ ರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಶಾಲೆಯಲ್ಲಿ ಈ ವರ್ಷ ಕೈಗೊಳ್ಳುವ ಚಟುವಟಿಕೆಗಳ ಕುರಿತು ಸವಿವರವಾಗಿ ವಿವರಿಸಿದರು . . ಸಭೆಯಲ್ಲಿ ನೂತನ ವರ್ಷದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು . ಪಿ ಟಿ ಎ ಅಧ್ಯಕ್ಷರಾಗಿ ಶ್ರೀ ಕುಂಞಲಿ , ಎಂ ಪಿ ಟಿ ಎ ಅಧ್ಯಕ್ಷೆಯಾಗಿ ಶ್ರೀಮತಿ ರೇವತಿ ಯಂ ಅವರು ಪುನರಾಯ್ಕೆಯಾದರು .

ಮುಖ್ಯ ಶಿಕ್ಷಕ ಶ್ರೀ ಗಣೇಶ್ ಕಾಮತ್ ರವರು ಗತವರ್ಷದ ವರದಿ ವಾಚಿಸಿದರು .

 

ಶಿಕ್ಷಕ ದಾಮೋದರ ಮಾಸ್ಟರ್ ಸ್ವಾಗತಿಸಿ ,

ಸೂಸಮ್ಮ ಟೀಚರ್ ವಂದಿಸಿದರು .

 

Tuesday 11 July 2017

                                 ಸಂಸ್ಥಾಪಕರ ದಿನ   


           

ಮುಂಡಿತ್ತಡ್ಕ :ಶ್ರೀ ಮಂಜಯ್ಯ  ಮೆಮೋರಿಯಲ್ ಎ ಯು   ಪಿ  ಶಾಲೆ ಮುಂಡಿತ್ತಡ್ಕದಲ್ಲಿ ಸಂಸ್ಥಾಪಕರಾದ ಶ್ರೀ ಮಂಜಯ್ಯ ಮಾಸ್ಟರವರ ಪುಣ್ಯಸಂಸ್ಮರಣಾ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಊರಿನ ಹಿರಿಯ ನಾಗರಿಕರಾದ ಮದನಪ್ಪ ಆಳ್ವರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. 

  
ಒಂದು ಕಾಲದಲ್ಲಿ ನಮ್ಮೂರಲ್ಲಿ ಬಹು ಪರಿಶ್ರಮದಿಂದ  ಶಾಲೆಯನ್ನು ಸ್ಥಾಪಿಸಿ ವಿದ್ಯಾದಾನವನ್ನು ಮಾಡಿ  ತನ್ಮೂಲಕ ಜನರನ್ನು ಜಾಗ್ರತಗೊಳಿಸಿ ಪ್ರಸ್ತುತ ಎಲ್ಲ ರೀತಿಯ ಮೂಲಭೂತ ಸೌಕರ್ಯ ಗಳನ್ನೂ ಲಭಿಸುವಲ್ಲಿ ಕಾರಣೀಭೂತರಾದ  ಮಹಾತ್ಮರ ಸಂಸ್ಮರಣಾ  ಕಾರ್ಯಕ್ರಮದಲ್ಲಿ  ಭಾಗಿಯಾಗಲು ಯೋಗ ಲಭಿಸಿದ್ದು ತಮ್ಮ ಭಾಗ್ಯವೆಂದರು.   ವಾರ್ಡು ಸದಸ್ಯರಾದ ಶ್ರೀ ಯುತ ಸಿದ್ದಿಕ್ ರವರು ಅಧ್ಯಕ್ಷತೆ ವಹಿಸಿದರು. ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ಟರ್ ,ನಿವೃತ್ತ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ವಿಜಯಲಕ್ಶ್ಮಿಟೀಚರ್ , ಮುರಹರಿ ಮಾಸ್ಟರ್,ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಯುತ ಉಮಾನಾಥ ಭಂಡಾರಿ  ಮೊದಲಾದವರು  ಶುಭಾಶಂಸನೆ ಗೈದರು.



 










 ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯುತ ಗಣೇಶ್ ಮಾಸ್ಟರ ರವರು ಸ್ವಾಗತಿಸಿ, ವಿಜಯಕುಮಾರರವರು ವಂದಿಸಿದರು.ಶಿಕ್ಷಕ ಪದ್ಮನಾಭ ನವರು ಕಾರ್ಯಕ್ರಮವನ್ನು ನಿರೂಪಿಸಿದರು .