FIRST TERM EXAMINATION WILL BE STARTING FROM 21ST OF THIS MONTH.......

Friday 15 December 2017



    ശ്രദ്ധ-മികവിലേക്കൊരു   ചുവട്    -2017 -18 

            എസ്.എം.എം.എ.യു.പി.എസ്.മുണ്ട്യത്തടുക്ക   പഠനപ്രയാസം  നേരിടുന്ന  ഓരോകുട്ടിക്കും അവർക്കാവശ്യമായ     പ്രത്യേകപഠനാനുഭവങ്ങൾ നൽകുന്നതിൻടെ    ഭാഗമായി  3  ,5  ക്ലാസ്സുകളിലെകുട്ടികളെലക്ഷ്യമിട്ടുകൊണ്ട് ശ്രദ്ധ-മികവിലേക്കൊരുചുവട്എന്നപരിപാടിനമ്മുടെ സ്‌കൂളിൽ  9 -12 -2017 ന് വാർഡ്മെമ്പർസിദ്ധീഖ് ഉദ്‌ഘാടനം ചെയ്‌തു.


വിദ്യാലയത്തിലെ മുഴുവൻഅധ്യാപകർ , ജനപ്രതിനിധികൾ ,പൂർവ്വവിദ്യാർത്ഥികൾ ,സന്നദ്ധസംഘടനകൾ ,രക്ഷിതാക്കൾ  തുടങ്ങിയവരുടെ പൂർണ്ണസഹകരണം ഉണ്ടായിരുന്നു.              ചടങ്ങിന് സ്കൂൾഹെഡ്മാസ്റ്റർ ശ്രീ ഗണേഷ്‌കാമത് സ്വാഗതംപറഞ്ഞു.പി.ടി.എ.പ്രസിഡണ്ട് അധ്യക്ഷൻ വഹിച്ച ചടങ്ങിൽസ്കൂൾമാനേജർ ശ്രീ ജനാർദ്ദനൻ മാസ്റ്റർ ,എം.പി.ടി.എ.പ്രസിഡണ്ട്തുടങ്ങിയവർ ആശംസകൾ അർപ്പിച്ചു

.എസ്.ആർ.ജി.കൺവീനർസന്തോഷ്‌കുമാർ മാസ്റ്റർ ശ്രദ്ധ പരിപാടിയെക്കുറിച്ച് വിശദീകരിച്ചു.വിജയകുമാരൻമാസ്റ്റർ നന്ദിപറഞ്ഞു.

Thursday 7 December 2017

P.T.A.   GENERAL BODY  MEETING                         ON     07-12-2017   
AGENDA  :    N.S.S  CAMP
                        :      CLASS LIBRARY  INAUGUARATION
                         :   THE PRIZE DISTRIBUTION FOR THE                                        STUDENTS  WHO WON THE DISTRICT 
                             AND SUB DISTRICT  LEVEL                                                          COMPETITION.














ತಾ . 07-12-2017  ಗುರುವಾರದಂದು ರಕ್ಷಕ-ಶಿಕ್ಷಕ  ಸಂಘದ ಮಹಾಸಭೆಯು ಪಿ ಟಿ  ಎ ಸದಸ್ಯರಾದ ಪುರುಷೋತ್ತಮ ರವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ  10.00 ಗಂಟೆಗೆ  ಸರಿಯಾಗಿ ಜರಗಿತು . ಕಾಟುಕುಕ್ಕೆ ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ  ಪದ್ಮನಾಭ ಶೆಟ್ಟಿ , ಅಧ್ಯಾಪಕ ರಾಜೇಶ್ ಸಿ ಎಚ್  ,ಶಾಲಾ  ವ್ಯವಸ್ಥಾಪಕರಾದ  ಶ್ರೀ ಜನಾರ್ದನ ಮಾಸ್ತರ್  ,ಮುಖ್ಯ ಶಿಕ್ಷಕರಾದ    ಗಣೇಶ್  ಕಾಮತ್  ರಕ್ಷಕ-ಶಿಕ್ಷಕರೆಲ್ಲರೂ ಸಭೆಯಲ್ಲಿ ಹಾಜರಿದ್ದರು . 
 ಪ್ರಾಂಶುಪಾಲರು, ಮಕ್ಕಳಿಗೆ   ಪುಸ್ತಕಗಳನ್ನು    ನೀಡುವ  ಮೂಲಕ   ತರಗತಿ ವಾಚನಾಲಯವನ್ನು ಉದ್ಘಾಟಿಸಿದರು . 
ಬಳಿಕ  ಎನ್  ಯಸ್  ಯಸ್  ಶಿಬಿರದ ಕಾರ್ಯಕ್ರಮಗಳ  ಬಗ್ಗೆ  ವಿಷದವಾಗಿ  ರಕ್ಷಕರಿಗೆ ತಿಳಿಯ ಪಡಿಸಿದರು.  ರಾಜೇಶ್  ಮಾಸ್ತರ್ ರವರು ಸಮಾರಂಭಕ್ಕೆ ಶುಭ ಹಾರೈಸಿದರು. ಜಿಲ್ಲಾ -ಉಪಜಿಲ್ಲಾ ಮಟ್ಟದ  ವಿಜೇತರಿಗೆ ಅಭಿನಂದನೆಯನ್ನು  ಸಲ್ಲಿಸಲಾಯಿತು .
ಶಾಲಾ ವ್ಯವಸ್ಥಾಪಕರು  ಸಮಾರಂಭಕ್ಕೆ  ಶುಭಹಾರೈಸಿದರು. ಮುಖ್ಯ ಶಿಕ್ಷಕ  ಗಣೇಶ್  ಕಾಮತ್  ಸರ್  ರವರು ಸ್ವಾಗತಿಸಿ ,ಶಿಕ್ಷಕ ವಿಜಯ ಕುಮಾರ್  ವಂದಿಸಿದರು .  ಶಿಕ್ಷಕ ಪದ್ಮನಾಭ  ನಾಯಕ್ ರವರು  ಕಾರ್ಯಕ್ರಮವನ್ನು  ನಿರೂಪಿಸಿದರು . 

Wednesday 25 October 2017

        ವಿಜ್ಞಾನೋತ್ಸವದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

                ಮುಂಡಿತ್ತಡ್ಕ :ಯಸ್ ಎಂ ಎಂ ಎ ಯು ಪಿ ಶಾಲಾ ವಿದ್ಯಾರ್ಥಿಗಳಾದ ನಾಲ್ಕನೇ ತರಗತಿಯ ಕಿರಣ ಅರಿಪ್ಪಾದೆ ಮತ್ತು ಮಧು ಶ್ರೀ ಇವರುಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವದಲ್ಲಿ ಎಲ್ ಪಿ ವಿಭಾಗದ ಸರಳ ಪ್ರಯೋಗದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ . 


Friday 13 October 2017

SCHOOL LEVEL  KALOTHSAVAM   HELD ON 13-10-2017 & 17-10-2017.

  എസ്.എം.എം.എ.യു .പി.സ്‌കൂൾ മുണ്ട്യത്തടുക്കയിലെ 2017 -18 വർഷത്തെ
സ്കൂൾതല കലോത്സവം 13 -10 -2017 &17 -10 -2017 തിയ്യതികളിൽ
നടന്നു.സ്കൂൾമാനേജർ  ശ്രീ ജനാർദ്ദനൻമാസ്റ്റർ ഉദ്‌ഘാടനം ചെയ്തു.
സ്കൂൾഹെഡ്മാസ്റ്റർ ശ്രീ ഗണേഷ്‌കാമത് അദ്ധ്യക്ഷസ്ഥാനം
വഹിച്ചു.ദാമോദരൻമാസ്റ്റർ സ്വാഗതം പറഞ്ഞു. സ്റ്റാഫ്‌സെക്രട്ടറി
പദ്മനാഭൻമാസ്റ്റർ ആശംസകൾ നേർന്നു.ഗംഗ ടീച്ചർ നന്ദി രേഖപ്പെടുത്തി.
എൽ.പി .യു .പി.വിഭാഗത്തിലായി വിവിധ മത്സരയിനങ്ങൾ നടന്നു. 
കുട്ടികൾ മികച്ച പ്രകടനം കാഴ്ച വെച്ചു .

Tuesday 10 October 2017






                                         ನಾಡ ಹಬ್ಬ 

                     ಯಸ್ ಯಂ ಯಂ ಎ ಯು ಪಿ ಶಾಲೆಯಲ್ಲಿ ದಸರಾವನ್ನು ಕನ್ನಡ ನಾಡ ಹಬ್ಬವನ್ನಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ಟರ್ ರವರು ವಹಿಸಿ ಮಾತಾಡಿದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಟೀಚರು ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಸದಸ್ಯ ಶ್ರೀ ಸದಾಶಿವ ರೈ ಪುತ್ತಿಗೆ ಮುಖ್ಯ ಅಥಿತಿಯಾಗಿದ್ದರು. 
                ದಸರಾವನ್ನು ನಾಡಹಬ್ಬನ್ನಾಗಿ ಆಚರಿಸಿದ ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಂದ ಹಾಗು ಅಧ್ಯಾಪಕ ವೃಂದದಿಂದ ನಾಡಗೀತೆಗಳು ಮನರಂಜಿಸಿದವು  ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಮುಖ್ಯೋಪಾದ್ಯಾಯರಾದ ಶ್ರೀ ಗಣೇಶ ಕಾಮತ್ ಸ್ವಾಗತಿಸಿ ಅಧ್ಯಾಪಿಕೆ ಕಾಲಾವತಿಯವರು ವಂದಿಸಿದರು. ಅಧ್ಯಾಪಕರಾದ ಪದ್ಮನಾಭ ನಾಯಕ್ ರವರು ಕಾರ್ಯಕ್ರಮ ನಿರೂಪಿಸಿದರು,ದಾಮೋದರ ಮಾಸ್ಟರ್ ನಾಡಹಬ್ಬದ ಮಹತ್ವವನ್ನು ವಿವರಿಸಿದರು. ಅಲ್ಲದೆ ನಾಡಹಬ್ಬ ಪ್ರಯುಕ್ತ ಶಾಲೆಯಲ್ಲಿ ಶಾರದಾ ಪೂಜೆಯನ್ನು ಏರ್ಪಡಿಸಲಾಗಿತ್ತು. ಹತ್ತಿರದ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆಯನ್ನು ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ ಮಹಾಪೂಜೆಯೊಂದಿಗೆ ಪ್ರಸಾದವನ್ನು ಹಂಚಲಾಯಿತು. 





 

 





Monday 9 October 2017

SCHOOL LEVEL  SCIENCE FAIR, MATHS FAIR , SOCIAL FAIR ,WORK  -  EXPERIENCE FAIR  IS HELD IN OUR SCHOOL ON 09-10-2017.

എസ്.എം.എം.എ.യു.പി.സ്‌കൂൾ മുണ്ട്യത്തടുക്കയിലെ 2017 -18 വർഷത്തെ 

ശാസ്ത്രമേള,പ്രവൃത്തിപരിചയമേള 09 -10 -2017 ന് നടന്നു. സ്കൂൾമാനേജർ 
ജനാർദ്ദനൻമാസ്റ്റർ ഉദ്‌ഘാടനം ചെയ്തു.പ്രവൃത്തിപരിചയമേളയിൽ 



Beedswork ,Fabric painting ,Agerbathi making, Claymodel ,Woodwork ,Papercraft

എന്നിവയും ഗണിതമേളയിൽ Geometrical chart , Number chart ,Puzzles 

മുതലായവയുടെയും മത്സരങ്ങൾ നടത്തി.വിജയികൾക്ക് സ്‌കൂൾ

ഹെഡ്മാസ്റ്റർ ശ്രീഗണേഷ്‌കാമത് സമ്മാനങ്ങൾ വിതരണം ചെയ്‌തു .    




Monday 2 October 2017


   ഒക്ടോബർ-2 -   ഗാന്ധിജയന്തി 



എസ്.എം.എം.എ.യു .പി.സ്‌കൂൾ മുണ്ട്യത്തടുക്കയിൽ  ഒക്ടോബര്-2 -ഗാന്ധിജയന്തി ആഘോഷിച്ചു.സ്കൂൾഹെഡ്മാസ്റ്റർ ശ്രീ ഗണേഷ്‌കാമത്പതാക ഉയർത്തി.സ്കൂൾമാനേജർ ശ്രീ ജനാർദ്ദനൻമാസ്റ്റർ ഗാന്ധിജയന്തിദിനത്തെക്കുറിച്ച് സംസാരിച്ചു.കുട്ടികൾ പരിസരശുചീകരണം നടത്തി.

Thursday 28 September 2017

                                      ಶಾರದಾ ಪೂಜೆ 

 

Monday 25 September 2017

                         SCHOOL LEVEL SPORTS








Wednesday 30 August 2017

                           ONAM CELEBRATION

എസ് .എം.എം.എ.യു.എസ്.മുണ്ട്യത്തടുക്കയിലെ ഈ വർഷത്തെ


ഓണാഘോഷപരിപാടി വിപുലമായരീതിയിൽ  ആഘോഷിച്ചു.

ഇതിൻടെ ഭാഗമായി ആഗസ്ത് -30  ന് സ്‌കൂളിൽ  ഓണസദ്യ ഒരുക്കി . 

31 ആം തീയ്യതി എൽ.പി ,യു.പി .കുട്ടികൾക്കായി വിവിധ മത്സരങ്ങളും
വിതരണം ചെയ്തു.



പൂക്കളമത്സരവും നടന്നു.വിജയികൾക്ക് സ്കൂൾമാനേജർ ശ്രീ . ജനാർദ്ദനൻ 

മാസ്റ്റർ , ഹെഡ് മാസ്റ്റർ ശ്രീ.ഗണേഷ്‌കാമത്  എന്നിവർ  സമ്മാനങ്ങൾ





























Tuesday 15 August 2017

   ಮುಂಡಿತ್ತಡ್ಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ  ಸಂಭ್ರಮ 


        



 








ಶ್ರೀ ಮಂಜಯ್ಯ ಸ್ಮಾರಕ ಎ. ಯು. ಪಿ. ಶಾಲೆ ಮುಂಡಿತ್ತಡ್ಕದಲ್ಲಿ 71 ನೆೇ ಸ್ವಾತಂತ್ರ್ಯ ದಿನಾಚರಣೆಯನ್ನುವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು . 9.30 ಕ್ಕೆ ಸರಿಯಾಗಿ ಪಿ. ಟಿ .ಎ .ಅಧ್ಯಕ್ಷರಾದ ಶ್ರೀ ಕುಂಞಲಿ ಯವರು ಧ್ವಜಾರೋಹಣ ಗೈದರು . ವಾರ್ಡ್ ಸದಸ್ಯ ಅಬೂಬಕರ್ ಸಿದ್ದಿಕ್ ,ಎಂ ಪಿ ಟಿ ಎ ಅಧ್ಯಕ್ಷೆ ರೇವತಿ ,ನಿವೃತ್ತ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ಟೀಚರ್ ,ರಕ್ಷಕರು ಸಭೆಯಲ್ಲಿ ಹಾಜರಿದ್ದರು . ಸಭಾ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ಟರವರು ಶುಭ ಹಾರೈಸುತ್ತಾ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ದೇಶ ಪ್ರೇಮಿಗಳನ್ನು ಸ್ಮರಿಸುತ್ತಾ ಅವರ ಮಾರ್ಗ ದರ್ಶನದಂತೆ ನಡೆದು ಜೀವನವನ್ನು ಪಾವನಗೊಳಿಸೋಣ ಎಂದರು. ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಕೊಡಲಾಯಿತು . ಸಿಹಿ ತಿಂಡಿ ವಿತರಣೆಯ ಬಳಿಕ ವಿದ್ಯಾರ್ಥಿಗಳು ನಗರದಲ್ಲಿ ಘೋಷಣೆಗಳೊಂದಿಗೆ ಸ್ವಾತಂತ್ರ್ಯೋತ್ಸವ ಮೆರವಣಿಗೆ ನಡೆಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಗಣೇಶ್ ಕಾಮತ್ ರವರು ಸ್ವಾಗತಿಸಿ, ವಿಜಯ ಕುಮಾರನ್ ವಂದಿಸಿದರು.



Tuesday 8 August 2017

HEALTH  CLASS  ON  08/08/2017  BY  

Mr.THIRUMALESHWARA-PHC PERLA











Sunday 23 July 2017


ವಾಚನಾ  ಸಪ್ತಾಹ 






ಶಾಲೆಯಲ್ಲಿ ಕೃಷಿ ಅಭಿವೃದ್ಧಿಯ ಕಾರ್ಯಾಗಾರ


ನಿರಂತರವಾಗಿ ಶಾಲೆಯಲ್ಲಿ ಬೆಳೆಸುವಂತಹ ತರಕಾರಿ ತೋಟ ಈ ವರ್ಷ ಮಳೆಗಾಲ ಆರಂಭದಲ್ಲೇ ಬಿತ್ತನಾ

ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾವ್ಯವಸ್ಥಾಪಕರಾದ ಶ್ರೀ ಯುತ

ಜನಾರ್ದನ ಮಾಸ್ಟರ್ ರವರು ಬೀಜ ಬಿತ್ತುವ ಮೂಲಕನೆರವೇರಿಸಿದರು. ತದನಂತರ ಎಲ್ಲಾ ಸಾಲುಗಳಲ್ಲಿ ಶಿಕ್ಷಕ- ಶಿಕ್ಷಕಿಯರು

ಹಾಗು ವಿದ್ಯಾರ್ಥಿ -ವಿದ್ಯಾರ್ಥಿನಿಯರು ವಿವಿಧ ತರದ ತರಕಾರಿ ಬೀಜ ವಿವಿಧ ತರದ ತರಕಾರಿ ಬೀಜಗಳನ್ನು ಬಿತ್ತಿದರು .









Thursday 20 July 2017

ರಕ್ಷಕ -ಶಿಕ್ಷಕ ಮಹಾಸಭೆ

ಮುಂಡಿತ್ತಡ್ಕ : ಮುಂಡಿತ್ತಡ್ಕ ಶ್ರೀ ಮಂಜಯ್ಯ ಸ್ಮಾರಕ ಎ. ಯು . ಪಿ ಶಾಲೆಯ ಶೈಕ್ಷಣಿಕ ವರ್ಷದ ರಕ್ಷಕ -ಶಿಕ್ಷಕ ಸಂಘದ ಮಹಾಸಭೆಯು ತಾ :20.07.17ನೇ ಗುರುವಾರ ಅಪರಾಹ್ನ 2 ಘಂಟೆಗೆ ಸರಿಯಾಗಿ ಪಿ . ಟಿ . ಎ ಅಧ್ಯಕ್ಷ ಶ್ರೀ ಕುಞಲಿ ಅವರ ಅಧ್ಯಕ್ಷತೆಯಲ್ಲಿ ಜರಗಿತು . ಸಭೆಯನ್ನು ಔಪಚಾರಿಕವಾಗಿ ಉದ್ಘಾಟಿಸುತ್ತಾ ಮಾತನಾಡಿದ ಪಂಚಾಯತು ಸದಸ್ಯ ಶ್ರೀ ಅಬೂಬಕ್ಕರ್ ಸಿದ್ದಿಕ್ ಅವರು

 

"ಮಕ್ಕಳ ಅಭಿವೃದ್ಧಿಯ ಜತೆಗೆ ಶಾಲೆಯ ಅಭಿವೃದ್ಧಿ ಯು ಸಾಧ್ಯ . ಶಾಲೆಯ ಎಲ್ಲಾ ಕಾರ್ಯ ಚಟುವಟಿಕೆಯಲ್ಲೂ ಹೆತ್ತವರ ಪಾಲು ಬಲು ಮುಖ್ಯ. ದಶಕಗಳ ಇತಿಹಾಸ ಹೊಂದಿರುವಂತಹ ನಮ್ಮೀ ಶಾಲೆ, ನಾಡಿನ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗಿದೆ . ಪ್ರಸ್ತುತ ಶಾಲೆಯ ಅಭಿವೃದ್ಧಿಗೆ ನಮ್ಮೆಲ್ಲರ ಪಾತ್ರ ಅನಿವಾರ್ಯವಾಗಿದೆ .ಅದಕ್ಕೆ ಪೂರಕವಾಗಿ ಪಂಚಾಯತು ಆಡಳಿತ ಮಂಡಳಿಯು ಯಾವಾತ್ತೂ ಬೆನ್ನೆಲುಬಾಗಿ ಇರುವುದೆಂದು ಭರವಸೆಯನ್ನು ನೀಡಿದರು .
ಶಾಲಾ ವ್ಯವಸ್ಥಾಪಕರಾದ ಶ್ರೀಯುತ ಜನಾರ್ದನ ಮಾಸ್ಟರ್ ಅವರು

 

"ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಶಾಲೆಯನ್ನು ಉಳಿಸಿ ಬೆಳೆಸುವುದು ತಮ್ಮೆಲ್ಲರ ಕರ್ತವ್ಯ . ಅದಕ್ಕಾಗಿ ಶಾಲೆಯಲ್ಲಿ ಹಮ್ಮಿಕೊಂಡ ಪ್ರತೀ ಚಟುವಟಿಕೆಯನ್ನೂ ಯಶಸ್ವಿಯಾಗಿ ನಿರ್ವಹಿಸಲು ಹೆತ್ತವರು ಸಹಕರಿಸಬೇಕೆಂದು ತಿಳಿಸಿದರು . ಎಂ . ಪಿ .ಟಿ .ಎ ಅಧ್ಯಕ್ಷೆ ಶ್ರೀಮತಿ ರೇವತಿ ಶುಭ ಹಾರೈಸಿದರು . ಅಧ್ಯಾಪಕರಾದ ಶ್ರೀ ಪದ್ಮನಾಭ ನಾಯಕ್ ರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಶಾಲೆಯಲ್ಲಿ ಈ ವರ್ಷ ಕೈಗೊಳ್ಳುವ ಚಟುವಟಿಕೆಗಳ ಕುರಿತು ಸವಿವರವಾಗಿ ವಿವರಿಸಿದರು . . ಸಭೆಯಲ್ಲಿ ನೂತನ ವರ್ಷದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು . ಪಿ ಟಿ ಎ ಅಧ್ಯಕ್ಷರಾಗಿ ಶ್ರೀ ಕುಂಞಲಿ , ಎಂ ಪಿ ಟಿ ಎ ಅಧ್ಯಕ್ಷೆಯಾಗಿ ಶ್ರೀಮತಿ ರೇವತಿ ಯಂ ಅವರು ಪುನರಾಯ್ಕೆಯಾದರು .

ಮುಖ್ಯ ಶಿಕ್ಷಕ ಶ್ರೀ ಗಣೇಶ್ ಕಾಮತ್ ರವರು ಗತವರ್ಷದ ವರದಿ ವಾಚಿಸಿದರು .

 

ಶಿಕ್ಷಕ ದಾಮೋದರ ಮಾಸ್ಟರ್ ಸ್ವಾಗತಿಸಿ ,

ಸೂಸಮ್ಮ ಟೀಚರ್ ವಂದಿಸಿದರು .

 

Tuesday 11 July 2017

                                 ಸಂಸ್ಥಾಪಕರ ದಿನ   


           

ಮುಂಡಿತ್ತಡ್ಕ :ಶ್ರೀ ಮಂಜಯ್ಯ  ಮೆಮೋರಿಯಲ್ ಎ ಯು   ಪಿ  ಶಾಲೆ ಮುಂಡಿತ್ತಡ್ಕದಲ್ಲಿ ಸಂಸ್ಥಾಪಕರಾದ ಶ್ರೀ ಮಂಜಯ್ಯ ಮಾಸ್ಟರವರ ಪುಣ್ಯಸಂಸ್ಮರಣಾ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಊರಿನ ಹಿರಿಯ ನಾಗರಿಕರಾದ ಮದನಪ್ಪ ಆಳ್ವರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. 

  
ಒಂದು ಕಾಲದಲ್ಲಿ ನಮ್ಮೂರಲ್ಲಿ ಬಹು ಪರಿಶ್ರಮದಿಂದ  ಶಾಲೆಯನ್ನು ಸ್ಥಾಪಿಸಿ ವಿದ್ಯಾದಾನವನ್ನು ಮಾಡಿ  ತನ್ಮೂಲಕ ಜನರನ್ನು ಜಾಗ್ರತಗೊಳಿಸಿ ಪ್ರಸ್ತುತ ಎಲ್ಲ ರೀತಿಯ ಮೂಲಭೂತ ಸೌಕರ್ಯ ಗಳನ್ನೂ ಲಭಿಸುವಲ್ಲಿ ಕಾರಣೀಭೂತರಾದ  ಮಹಾತ್ಮರ ಸಂಸ್ಮರಣಾ  ಕಾರ್ಯಕ್ರಮದಲ್ಲಿ  ಭಾಗಿಯಾಗಲು ಯೋಗ ಲಭಿಸಿದ್ದು ತಮ್ಮ ಭಾಗ್ಯವೆಂದರು.   ವಾರ್ಡು ಸದಸ್ಯರಾದ ಶ್ರೀ ಯುತ ಸಿದ್ದಿಕ್ ರವರು ಅಧ್ಯಕ್ಷತೆ ವಹಿಸಿದರು. ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ಟರ್ ,ನಿವೃತ್ತ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ವಿಜಯಲಕ್ಶ್ಮಿಟೀಚರ್ , ಮುರಹರಿ ಮಾಸ್ಟರ್,ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಯುತ ಉಮಾನಾಥ ಭಂಡಾರಿ  ಮೊದಲಾದವರು  ಶುಭಾಶಂಸನೆ ಗೈದರು.



 










 ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯುತ ಗಣೇಶ್ ಮಾಸ್ಟರ ರವರು ಸ್ವಾಗತಿಸಿ, ವಿಜಯಕುಮಾರರವರು ವಂದಿಸಿದರು.ಶಿಕ್ಷಕ ಪದ್ಮನಾಭ ನವರು ಕಾರ್ಯಕ್ರಮವನ್ನು ನಿರೂಪಿಸಿದರು .


 

Friday 23 June 2017

                                  ಗ್ಯಾಸ್ ಸ್ಟವ್ ಉದ್ಘಾಟನೆ 

   


   


             



 . ಶ್ರೀ ಮಂಜಯ್ಯ ಸ್ಮಾರಕ ಎ ಯು ಪಿ ಶಾಲೆ ಮುಂಡಿತ್ತಡ್ಕದಲ್ಲಿ

ತಾ:15-06-2017ರಂದು ಅಡುಗೆ

ಅನಿಲ ಸಂಪರ್ಕ ಯೋಜನೆ ಯನ್ನು ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ

ಟೀಚರವರು ಹಾಲನ್ನು ಬಿಸಿ ಮಾಡುವ ಮೂಲಕ ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ

ಜನಾರ್ದನ ಮಾಸ್ಟರ್ ,ಎಂ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ರೇವತಿ ,ಮುಖ್ಯೋಪಾಧ್ಯಾಯರಾದ ಶ್ರೀ

ಗಣೇಶ್ ಕಾಮತ್,ಅಡುಗೆಯವರಾದ ಶ್ರೀಮತಿ ಪಾರ್ವತಿ ಉಪಸ್ಥಿತರಿದ್ದರು. ಗಣೇಶ್ ಕಾಮತ್ ರವರು

ಸ್ವಾಗತಿಸಿ ಸ್ಟಾಫ್ ಸೆಕ್ರಟರಿ ಪದ್ಮನಾಭ ಮಾಸ್ಟರ್ ಧನ್ಯವಾದ ಅರ್ಪಿಸಿದರು

Wednesday 21 June 2017

 ವಿಶ್ವ ಯೋಗ ದಿನಾಚರಣೆ

 

ವಿಶ್ವಯೋಗ ದಿನಾಚರಣೆಯ ಅಂಗವಾಗಿ ಶಿಕ್ಷಕ ದಾಮೋದರ ಮಾಸ್ತರ್ ರವರು ಸೂರ್ಯ ನಮಸ್ಕಾರದ ವಿವಿಧ ಹಂತಗಳನ್ನು ತಿಳಿಯಪಡಿಸಿದರು . .