FIRST TERM EXAMINATION WILL BE STARTING FROM 21ST OF THIS MONTH.......

Monday 29 June 2015


ಶಾಲಾ   ವಾಹನದ    ಶುಭಾರಂಭ  














ಮುಂಡಿತ್ತಡ್ಕ    ಜೂನ್  30:   ಯಸ್.  ಯಂ.  ಯಂ.  ಎ.  ಯು.  ಪಿ.  ಶಾಲೆ ,  ಮುಂಡಿತ್ತಡ್ಕ ಇದರ

ವ್ಯವಸ್ಥಾಪಕರು   ಶಾಲೆಗಾಗಿ  ಕೊಡುಗೆ  ನೀಡಿದ  ನೂತನ  ಬಸ್ಸಿನ  ಉದ್ಘಾಟನೆಯನ್ನು ಎಣ್ಮಕಜೆ ಗ್ರಾಮ 
ಪಂಚಾಯತ್   ಸದಸ್ಯೆ  ಶ್ರೀಮತಿ ಬುಶ್ರಾ ಸಿದ್ದಿಕ್  ನೆರವೇರಿಸಿದರು . ಶಾಲಾ  ಪಿ. ಟಿ .ಎ  ಅಧ್ಯಕ್ಷರಾದ ಶ್ರೀ 
ಸಂತೋಷ್ ಕುಮಾರ್  ರವರು  ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ವಹಿಸಿದರು . ಗ್ರಾಮೀಣಪ್ರದೇಶಗಳಿಂದ
 ಶಾಲೆಗೆ  ಬರುವ  ವಿದ್ಯಾರ್ಥಿಗಳ  ಪ್ರಯಾಣ  ಸೌಕರ್ಯಕ್ಕಾಗಿ  ಬಸ್ಸಿನ  ವ್ಯವಸ್ಥೆಯನ್ನು 
 ರೂಪೀಕರಿಸಲಾಗಿದೆ .  ಈ ವ್ಯವಸ್ಥೆಯನ್ನು ರಕ್ಷಕರು ಸದುಪಯೋಗಪಡಿಸಿಕೊಳ್ಳಬೇಕೆಂದು  ಈ 
ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕರು ಹಾರೈಸಿದರು .  ಉದ್ಘಾಟನೆಯ  ಅಂಗವಾಗಿ  ಎಲ್ಲರಿಗೂ
  ಸಿಹಿತಿಂಡಿ ವಿತರಿಸಲಾಯಿತು .
                        Μ P Τ Α   ಅಧ್ಯಕ್ಷೆ ಲ್ಯೆಸಮ್ಮ , 
P Τ Α ಉಪಾಧ್ಯಕ್ಷ  ಶ್ರೀ ಸುಬ್ಭಣ್ಣ ರೈ ,ಶ್ರೀ
 ರಘುರಾಮ್, ಶ್ರೀಮತಿ ವಿಜಯಲಕ್ಷ್ಮಿ ಟೀಚರ್ , 
ಚಿದಾನಂದ ಆಳ್ವ , ಉದಯಭಾನು ಮಾಸ್ಟರ್ 
ಮುಂತಾದವರು ಶುಭಹಾರೈಸಿದರು .  ಶಾಲಾಮುಖ್ಯೋಪಾಧ್ಯಾಯಿನಿ  ಶ್ರೀಮತಿ ಪದ್ಮಾವತಿ ಟೀಚರ್ 
 ಸ್ವಾಗತಿಸಿ  , ಶ್ರೀ  ಪಿ.      ಸುಧಾಮ ಮಾಸ್ಟರ್  ವಂದಿಸಿದರು .                                         


















      

                       
             സ്കൂൾ   ബസ്‌    ഉദ്ഘാടനം


             മുണ്ട്യത്തടുക്ക :   S . M .M .A .U .P . മുണ്ട്യ ത്ത ടുക്ക  സ്കൂളിൽ സ്കൂൾ 

 മാനേജർ  സംഭാവന  ചെയ്ത  പുതിയ  ബസ്സി ണ്ടെ  ഉദ്ഘാടനം  എന്മകജെ 

 ഗ്രാമ പഞ്ചായത്ത്‌ മെമ്പർ ബുഷ്‌റ  സിദ്ദിഖ്  30 -06 -2015 ന് ചൊവ്വാഴച്ച  രാവിലെ

  10  മണിക്ക് നിർവഹിച്ചു . സ്കൂൾ  ഹെഡ്മിസ്ട്രെസ്സ്  പത്മാവതി  ടീച്ചർ 

 സ്വാഗതം  പറഞ്ഞ  ചടങ്ങിൽ  പി . ടി .എ . പ്രസിഡണ്ട്  അധ്യക്ഷനായിരുന്നു .

 ഗ്രാമ  പ്രദേശത്ത് സ്ഥിതി  ചെയ്യുന്ന  സ്കൂളിന് , യാത്രാ സൌകര്യം 

പരിമിതമായ ഉൾപ്രദേശങ്ങളിലെ കുട്ടികൾക്ക് സ്കൂളിലെ ത്തി ച്ചേരാൻ  ബസ്‌ 

 വലിയ  അനുഗ്രഹ മാണ് . ബസ്‌ സ്കൂളി ണ്ടെ വിദ്യാഭ്യാസ  പുരോഗതിക്കും 

 കുട്ടികളുടെ വർദ്ധനവിനും  കാരണമാകുമെന്ന്  മാനേജർ  പ്രതീക്ഷ 

 പ്രകടിപ്പിച്ചു . സ്കൂൾ  കാര്യക്ഷമമായി  നടത്തിക്കൊണ്ടുപോകേണ്ടത് 

രക്ഷിതാക്കളുടെയും അധ്യാപകരുടെയും  കടമയാണെന്ന്  അദ്ദേഹം 

 ഓർമിപ്പിച്ചു  . ഉദ്ഘാടനത്തോടനുബന്ധിച്ച്  കുട്ടികൾക്ക്  മധുരപലഹാരങ്ങൾ 

 നൽകി . ചടങ്ങിൽ  ശ്രീ . രഘുറാം , വിജയലക്ഷ്മി  ടീച്ചർ , M .P . T .A  .പ്രസിഡണ്ട്

  ലൈസമ്മ , P .T .A . വൈസ്പ്രസിഡണ്ട്  സുബ്ബഅണ്ണ  റായ് ,ചിദാനന്ദ  ആൾവ്വാ 

, ഉദയഭാനു  മാസ്റ്റർ  തുടങ്ങിയവർ  ആശംസകൾ  അർപ്പിച്ചു . പി . സുദാമ 

 മാസ്റ്റർ  നന്ദി  പ്രകാശിപ്പിച്ചു.





                                      

Friday 26 June 2015

                                                    ജൂണ്‍ 26

                          
    ലോക മയക്കുമരുന്ന് വിരുദ്ധ ദിനം


               ജൂണ്‍ 26 നു  ലോക  മയക്കു മരുന്ന്  വിരുദ്ധ  ദിനമായി  സ്കൂളിൽ  ആച  രിച്ചു .മദ്യം, മയക്കുമരുന്ന് ,പുകയില ,പാൻമസാല തുടങ്ങിയ  ലഹരി  പതാർ ത് ഥങൾ  വ്യക്തികളെയും  കുടുംങ്ങ ളേ യും  ആരോഗ്യപരമായും  സാമ്പത്തികമായും സാമൂഹികമായും  സാംസ്കാരികമായും നശിപ്പിക്കുന്ന  സാമൂഹ്യ വിപത്താണ്  എന്ന്  അസ്സംബ്ലിയിൽ  സ്റ്റാഫ്‌സെക്രട്ടറി  ഉദയഭാനു  മാസ്റ്റർ  വിശദീകരിച്ചുകൊടുത്തു . പിന്നീട്  വിജയൻമാസ്റ്റർ  മയക്കുമരുന്ന് വിരുദ്ധ പ്രതിജ്ഞ  ചൊല്ലിക്കൊടുത്തു .

               

                      സോഷ്യൽക്ലബ്ബിണ്ടെ  നേതൃത്വത്തിൽ  കുട്ടികൾ  പ്ലകാർഡുകൾ  തയ്യാറാക്കി . തുടർന്ന്  ഉമാനാഥ മാസ്റ്ററുടെ  നേതൃത്വത്തിൽ മുണ്ടിതട്ക  ടൌണ്‍വരെ  മയക്കുമരുന്ന്  വിരുദ്ധ  റാലി  സംഘടിപ്പിച്ചു .  കുട്ടികൾ  മുദ്രാവാക്യങ്ങൾ  മുഴക്കി  റാലിയിൽ  അണിചേർന്നു .







 

         

 




    ವಾಚನಾ  ಸಪ್ತಾಹ   ಸಮಾರೋಪ 




           ವಿದ್ಯಾರಂಗ   ಕಲಾ  ಸಾಹಿತ್ಯ  ವೇದಿಕೆಯ   ನೇತ್ರತ್ವದಲ್ಲಿ   ಜರಗಿದ  ವಾಚನಾ  ಸಪ್ತಾಹದ  ಸಮಾರೋಪ  ಸಮಾರಂಭವು  25 .06.2015   ಶುಕ್ರವಾರದಂದು   ಮುಂಡಿತ್ತಡ್ಕ   ಶಾಲೆಯಲ್ಲಿ  ಬಹಳ  ವಿಜೃಂಭಣೆಯಿಂದ   ಜರಗಿತು . ಮಕ್ಕಳ  ಆಸ್ವಾದನಾ  ಟಿಪ್ಪಣಿ  " ಚಿಗುರು " ಎಂಬ ಹಸ್ತಪತ್ರಿಕೆಯನ್ನು  ಬಿಡುಗಡೆಗೊಳಿಸುವುದರ  ಮೂಲಕ  ಶಾಲಾ ವ್ಯವಸ್ಥಾಪಕರು  ಸಮಾರಂಭವನ್ನು  ಉದ್ಘಾಟಿಸಿದರು .   ಸ್ಟಾಫ್  ಸೆಕ್ರೆಟರಿ  ಉದಯಭಾನು   ಮಾಸ್ಟರ್  ರವರು  ಕಾರ್ಯಕ್ರಮಕ್ಕೆ  ಶುಭವನ್ನು ಹಾರೈಸಿದರು . ವಿದ್ಯಾರ್ಥಿಗಳಿಂದ  ಓದಿನ ಟಿಪ್ಪಣಿ  ನಡೆಯಿತು .ವಾಚನಾ ವಾರದ  ಅಂಗವಾಗಿ ನಡೆಸಲ್ಪಟ್ಟ  ಸ್ಪರ್ಧೆಯಲ್ಲಿ  ವಿಜೇತರಾದವರಿಗೆ  ಈ  ಸಂದರ್ಭದಲ್ಲಿ  ಬಹುಮಾನವನ್ನು  ವಿತರಿಸಲಾಯಿತು.  

       ಶಾಲಾ  ಮುಖ್ಯ  ಶಿಕ್ಷಕಿ     ಪದ್ಮಾವತಿ ಟೀಚರ್  ರವರು  ಕಾರ್ಯಕ್ರಮದ  ಅಧ್ಯಕ್ಷತೆಯನ್ನು ವಹಿಸಿದರು. ದಾಮೋದರ  ಮಾಸ್ಟರ್  ರವರು ಸ್ವಾಗತಿಸಿ , ಪದ್ಮನಾಭ  ಮಾಸ್ಟರ್  ರವರು ಧನ್ಯವಾದವಿತ್ತರು .  ಸುದಾಮ  ಮಾಸ್ಟರ್ ರವರು  ಕಾರ್ಯಕ್ರಮವನ್ನು  ನಿರೂಪಿಸಿದರು . 


 

    '' ಚಿಗುರು  ''  ಹಸ್ತ  ಪತ್ರಿಕೆಯನ್ನು  ಬಿಡುಗಡೆ 

 ಗೊಳಿಸುತ್ತಿರುವ  ಶಾಲಾ ವ್ಯವಸ್ಥಾಪಕರು .............     



ಆಸ್ವಾದನ   ಟಿಪ್ಪಣಿ ಯಲ್ಲಿ ಪ್ರಥಮ  ಸ್ಥಾನ  
ಗಳಿಸಿದ 

 
ವಿವಿಧ  ಸ್ಪರ್ಧೆಗಳಲ್ಲಿ   ವಿಜೇತರಾದ    ವಿದ್ಯಾರ್ಥಿಗಳು ... 

      





               

Monday 15 June 2015

ಸಿದ್ಧತೆ     --- 2015      ಚಟುವಟಿಕೆ    ಪ್ಯಾಕೇಜ್  



ಚಟುವಟಿಕೆಯಲ್ಲಿ     ನಿರತರಾದ     ವಿದ್ಯಾರ್ಥಿಗಳು  .... 



















Friday 5 June 2015

ವಿಶ್ವ  ಪರಿಸರ  ದಿನ 





               ವಿಶ್ವಪರಿಸರ  ದಿನಾಚರಣೆಯ  ಅಂಗವಾಗಿ  ಮುಂಡಿತ್ತಡ್ಕ  ಶಾಲೆಯಲ್ಲಿ  ವಿವಿಧ  ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಶಾಲಾ ವ್ಯವಸ್ಥಾಪಕರಾದ  ಶ್ರೀ  ಜನಾರ್ದನ ಮಾಸ್ತರ್  ರವರು  ಶಾಲಾ ಪರಿಸರದಲ್ಲಿ ಗಿಡವೊಂದನ್ನು  ನೆಡುವುದರ  ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು .ಶಾಲಾ ಅಸೆಂಬ್ಲಿಯಲ್ಲಿ   ಶಾಲಾ ಮುಖ್ಯ  ಶಿಕ್ಷಕಿ  ಪದ್ಮಾವತಿ   ಟೀಚರ್ ,ಹಿರಿಯ  ಅಧ್ಯಾಪಕರಾದ ಉದಯಭಾನು ಮಾಸ್ಟರ್  ಹಾಗೂ  ಸುದಾಮ ಮಾಸ್ಟರ್  ರವರು  ಪರಿಸರ  ದಿನದ  ಆಚರಣೆಯ  ಮಹತ್ವ    ಮತ್ತು  ಸಂದೇಶವನ್ನು  ತಿಳಿಸಿದರು.   ಎಲ್ . ಪಿ   ಮತ್ತು   ಯು , ಪಿ.  ತರಗತಿಯ  ವಿದ್ಯಾರ್ಥಿಗಳಿಗೆ  ಪ್ರಕೃತಿಯ  ಕುರಿತಾದ  ಚಿತ್ರ  ರಚನೆ , ಘೋಷ ಣಾ   ವಾಕ್ಯ , ಲಘು  ಟಿಪ್ಪಣಿ  , ಪೋಸ್ಟರ್  ತಯಾರಿ  ಮೊದಲಾದ  ಚಟುವಟಿಕೆಗಳನ್ನು  ಹಮ್ಮಿಕೊಳ್ಳಲಾಯಿತು . ಈ  ಎಲ್ಲಾ ಕಾರ್ಯಕ್ರಮಗಳ  ಮೂಲಕ   ಮಕ್ಕಳಲ್ಲಿ  ಪರಿಸರ  ದಿನದ  ಮಹತ್ವದ   ಅರಿವನ್ನು  ಮೂಡಿಸಿದುದಲ್ಲದೆ  , ಪರಿಸರ  ರಕ್ಷಣೆಯ  ಬಗ್ಗೆ  ಜಾಗ್ರತಿಯನ್ನು   ಉಂಟು ಮಾಡಲು   ಸಾಧ್ಯವಾಯಿತು .





ಮುಖ್ಯ ಶಿಕ್ಷಕಿ  ಶ್ರೀಮತಿ  ಪದ್ಮಾವತಿ  ಟೀಚರ್  ರವರು  ಶಾಲಾ ಮಕ್ಕಳಿಗೆ  ಗಿಡಗಳನ್ನು  ವಿತರಿಸುತ್ತಿರುವುದು ...............    



    
   


ಪರಿಸರ    ದಿನದ  ಅಂಗವಾಗಿ   ತಯಾರಾದ    ಭಿತ್ತಿ  ಪತ್ರಿಕೆಗಳು    ..... 















  

Monday 1 June 2015

 ಶಾಲಾ   ಪ್ರವೇಶೋತ್ಸವ       ೨೦೧೫    -೨೦೧೬ 






      ಮುಂಡಿತ್ತಡ್ಕ : ಶ್ರೀ ಮಂಜಯ್ಯ ಮೆಮೋರಿಯಲ್ ಅನುದಾನಿತ ಹಿರಿಯ 
  
ಪ್ರಾಥಮಿಕ ಶಾಲೆಯ ೨೦೧೫-೨೦೧೬ ನೇ ಶಾಲಾ ಅಧ್ಯಯನ ವರ್ಷದ

ಪ್ರವೆಶೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು . ಚೆಂಡೆ ವಾದ್ಯಗಳ

ಮೇಳದೊಂದಿಗೆ ವಿದೂಷಕ ಮುಖವಾಡ ಧರಿಸಿದ ವಿದ್ಯಾರ್ಥಿಗಳು 

ಆಕರ್ಷಕವಾಗಿ ಕುಣಿಯುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದರು . ಹೊಸದಾಗಿ 

ಶಾಲೆಗೆ ಸೇರಿದ ಪುಟಾಣಿಗಳಿಗೆ ಬಣ್ಣ - ಬಣ್ಣದ ಪುಗ್ಗೆಗಳನ್ನು ನೀಡಿ

ಅಧ್ಯಾಪಿಕೆಯರು ಸ್ವಾಗತಿಸಿದರು . ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ 

ಶಾಲಾ ಪಿ.ಟಿ .ಎ ಅಧ್ಯಕ್ಷರಾದ ಸಂತೋಷ್ ಕುಮಾರ್ ರವರು ಅಧ್ಯಕ್ಷತೆ ಯನ್ನು

ವಹಿಸಿದ್ದರು . ಶಾಲಾ ವ್ಯವಸ್ಥಾಪಕರಾದ ಶ್ರೀ ಪಿ ಜನಾರ್ದನ  ಮಾಸ್ಟರ್ ರವರು

 ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉಧ್ಘಾಟಿಸಿ ದರು . ಮಕ್ಕಳು 

ಉತ್ಸಾಹದಿಂದ ಪ್ರವೇಶೋತ್ಸವ ಗೀತೆಯನ್ನು ಹಾಡಿದರು . ನಿವ್ರತ್ತ ಮುಖ್ಯೋ 

ಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಟೀಚರ್ , ಎಂ . ಪಿ. ಟಿ . ಎ ಅಧ್ಯಕ್ಷೆ 

ಶ್ರೀಮತಿ ಲಿಸಮ್ಮ , ಸ್ಟಾಫ್ ಸೆಕ್ರೆಟರಿ ಉದಯಭಾನು ಮಾಸ್ಟರ್ ರವರು 

ಶುಭಾಶಂಸನೆ ಗೈದರು . ಈ ಸಂದರ್ಭದಲ್ಲಿ ಒಂದನೆಯ ತರಗತಿಯ 

ವಿದ್ಯಾರ್ಥಿಗಳಿಗೆ ಶಾಲಾ ಸಂಸ್ಥಾಪಕರ  ಸ್ಮರಣಾರ್ಥವಾಗಿ  ಉಚಿತ ಕೊಡೆ ಮತ್ತು 

ಬ್ಯಾಗು ಗಳನ್ನು ವಿತರಿಸಲಾಯಿತು . ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ ಯವರು

 ಸ್ವಾಗತಿಸಿ, ವಿಜಯಕುಮಾರ್ ಕೆ. ವಿ ವಂದಿಸಿದರು . ಸುಧಾಮ ಮಾಸ್ಟರ್ ರವರು 

ಕಾರ್ಯಕ್ರಮವನ್ನು ನಿರೂ ಪಿಸಿದರು . ಸಮಾರಂಭದ ಕೊನೆಯಲ್ಲಿ ಎಲ್ಲರಿಗೂ 

ಸಿಹಿತಿಂಡಿ ಯನ್ನು ವಿತರಿಸಲಾಯಿತು . 


 ಶಾಲಾ ವ್ಯವಸ್ಥಾಪಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿರುವುದು 

  

                               
        


ನವಾಗತ    ಪುಟಾಣಿಗಳನ್ನು   ಸ್ವಾಗತಿಸುತ್ತಿರುವ   ವಿದೂಷಕ  ವೇಷಗಳು....