FIRST TERM EXAMINATION WILL BE STARTING FROM 21ST OF THIS MONTH.......

Friday 5 June 2015

ವಿಶ್ವ  ಪರಿಸರ  ದಿನ 





               ವಿಶ್ವಪರಿಸರ  ದಿನಾಚರಣೆಯ  ಅಂಗವಾಗಿ  ಮುಂಡಿತ್ತಡ್ಕ  ಶಾಲೆಯಲ್ಲಿ  ವಿವಿಧ  ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಶಾಲಾ ವ್ಯವಸ್ಥಾಪಕರಾದ  ಶ್ರೀ  ಜನಾರ್ದನ ಮಾಸ್ತರ್  ರವರು  ಶಾಲಾ ಪರಿಸರದಲ್ಲಿ ಗಿಡವೊಂದನ್ನು  ನೆಡುವುದರ  ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು .ಶಾಲಾ ಅಸೆಂಬ್ಲಿಯಲ್ಲಿ   ಶಾಲಾ ಮುಖ್ಯ  ಶಿಕ್ಷಕಿ  ಪದ್ಮಾವತಿ   ಟೀಚರ್ ,ಹಿರಿಯ  ಅಧ್ಯಾಪಕರಾದ ಉದಯಭಾನು ಮಾಸ್ಟರ್  ಹಾಗೂ  ಸುದಾಮ ಮಾಸ್ಟರ್  ರವರು  ಪರಿಸರ  ದಿನದ  ಆಚರಣೆಯ  ಮಹತ್ವ    ಮತ್ತು  ಸಂದೇಶವನ್ನು  ತಿಳಿಸಿದರು.   ಎಲ್ . ಪಿ   ಮತ್ತು   ಯು , ಪಿ.  ತರಗತಿಯ  ವಿದ್ಯಾರ್ಥಿಗಳಿಗೆ  ಪ್ರಕೃತಿಯ  ಕುರಿತಾದ  ಚಿತ್ರ  ರಚನೆ , ಘೋಷ ಣಾ   ವಾಕ್ಯ , ಲಘು  ಟಿಪ್ಪಣಿ  , ಪೋಸ್ಟರ್  ತಯಾರಿ  ಮೊದಲಾದ  ಚಟುವಟಿಕೆಗಳನ್ನು  ಹಮ್ಮಿಕೊಳ್ಳಲಾಯಿತು . ಈ  ಎಲ್ಲಾ ಕಾರ್ಯಕ್ರಮಗಳ  ಮೂಲಕ   ಮಕ್ಕಳಲ್ಲಿ  ಪರಿಸರ  ದಿನದ  ಮಹತ್ವದ   ಅರಿವನ್ನು  ಮೂಡಿಸಿದುದಲ್ಲದೆ  , ಪರಿಸರ  ರಕ್ಷಣೆಯ  ಬಗ್ಗೆ  ಜಾಗ್ರತಿಯನ್ನು   ಉಂಟು ಮಾಡಲು   ಸಾಧ್ಯವಾಯಿತು .





ಮುಖ್ಯ ಶಿಕ್ಷಕಿ  ಶ್ರೀಮತಿ  ಪದ್ಮಾವತಿ  ಟೀಚರ್  ರವರು  ಶಾಲಾ ಮಕ್ಕಳಿಗೆ  ಗಿಡಗಳನ್ನು  ವಿತರಿಸುತ್ತಿರುವುದು ...............    



    
   


ಪರಿಸರ    ದಿನದ  ಅಂಗವಾಗಿ   ತಯಾರಾದ    ಭಿತ್ತಿ  ಪತ್ರಿಕೆಗಳು    ..... 















  

No comments:

Post a Comment