FIRST TERM EXAMINATION WILL BE STARTING FROM 21ST OF THIS MONTH.......

Sunday 30 November 2014

 ಕುಂಬಳೆ  ಉಪಜಿಲ್ಲಾ  ಮಟ್ಟದ  ಕಲೋತ್ಸವದಲ್ಲಿ  ಉರ್ದು ಸಮೂಹ  ಗಾನ  ಮತ್ತು  ಉರ್ದು ಕ್ವಿಜ್ ನಲ್ಲಿ  "ಎ "  ಗ್ರೇಡ್  ನೊಂದಿಗೆ   ಪ್ರಥಮ  ಸ್ಥಾನ  ಪಡೆದು  ಜಿಲ್ಲಾ  ಮಟ್ಟಕ್ಕೆ  ಆಯ್ಕೆಯಾದ  ಮುಂಡಿತ್ತಡ್ಕ  ಎಸ್ ಎಂ ಎಂ ಎ  ಯು ಪಿ ಶಾಲೆಯ   ವಿದ್ಯಾರ್ಥಿಗಳು   ಅಧ್ಯಾಪಕರೊಂದಿಗೆ  ..................          






ವಿವಿಧ  ಸ್ಪರ್ಧೆಗಳಲ್ಲಿ ವಿಜೇತರಾದ  ವಿದ್ಯಾರ್ಥಿಗಳು ....... 






ಕುಂಬಳೆ ಉಪಜಿಲ್ಲಾ ಮಟ್ಟದ  ವಿದ್ಯಾರಂಗ  ಕಲಾ  ಸಾಹಿತ್ಯ  ವೇದಿಕೆಯ [ಮ್ಯಾಗಸಿನ್]  ಸಾಹಿತ್ಯ ಸಂಚಿಕೆ  ಸ್ಪರ್ಧೆಯಲ್ಲಿ  ದ್ವಿತೀಯ  ಬಹುಮಾನ  ಗಳಿಸಿದ ಯಸ್ .ಯಮ್ .ಯಮ್. ಎ .ಯು  ಪಿ .ಶಾಲೆ , ಮುಂಡಿತ್ತಡ್ಕ .......... 




ಕನ್ನಡ  ಒಗಟು  ಸ್ಪರ್ಧೆಯಲ್ಲಿ    ತ್ರಿತೀಯ  ಬಹುಮಾನ  ಗಳಿಸಿದ  ಪ್ರತೀಕ್ಷಾ  ಮತ್ತು  ಅಭಿಜಿತ್    


Saturday 15 November 2014

   ಸರ್ವಶಿಕ್ಷಾ   ಅಭಿಯಾನ್   ೨೦೧೪-೨೦೧೫

ರಕ್ಷಕರ   ಸಮ್ಮೇಳನ   

ತಾ ೧೪-೧೧-೨೦೧೪ ರಂದು ಮುಂಡಿತ್ತಡ್ಕ ಶಾಲೆಯಲ್ಲಿ ರಕ್ಷಕರ ಸಮ್ಮೇಳನವು ಜರಗಿತು . ಎಂ . ಪಿ .ಟಿ .ಎ . ಅಧ್ಯಕ್ಷೆ ಲಿಸಮ್ಮ ಜೋಸೆಫ್ ರವರು  ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ವಹಿಸಿದ್ದರು . ವಾರ್ಡ್  ಸದಸ್ಯೆ   ಬುಷ್ರ ಸಿದ್ದಿಕ್ ರವರು ಸಮಾರಂಭದ  ಉದ್ಘಾಟನೆಯನ್ನು  ನೆರವೇರಿಸಿದರು . ಶಾಲಾ ವ್ಯವಸ್ಥಾಪಕರಾದ  ಶ್ರೀ ಜನಾರ್ದನ  ಮಾಸ್ಟರ್ ಹಾಗೂ  ಸುಬ್ಬಣ್ಣ ರೈ  ಯವರು  ಸಮಾರಂಭಕ್ಕೆ  ಶುಭವನ್ನು  ಹಾರೈಸಿದರು .  ಮುಖ್ಯ ಶಿಕ್ಷಕಿ ಪದ್ಮಾವತಿಯವರು  ಸ್ವಾಗತಿಸಿ , ಶಿಕ್ಷಕ  ವಿಜಯ ಕುಮಾರ್ ರವರು  ವಂದಿಸಿದರು . ಬಳಿಕ     ಸಂಪನ್ಮೂಲ  ತರಬೇತುದಾರರಾದ  ಪದ್ಮನಾಭ  ಮಾಸ್ಟರ್ ರವರು  ರಕ್ಷಕರಿಗಾಗಿ  ತರಗತಿಯನ್ನು ನಡೆಸಿ ಕೊಟ್ಟರು .  



        

Monday 3 November 2014

ಮುಂಡಿತ್ತಡ್ಕ  ಶಾಲೆಯಲ್ಲಿ  ಕಲೋತ್ಸವ  

 

 ಶಾಲಾ ಮಟ್ಟದ ಕಲೋತ್ಸವವು ತಾ .೩೦/೧೦/೨೦೧೪ ರಂದು  ಪಿ.ಟಿ. ಎ  ಅಧ್ಯಕ್ಷರಾದ  ಸಂತೋಷ್ ಕುಮಾರ್ ರವರ  ಅಧ್ಯಕ್ಷತೆಯಲ್ಲಿ  ಜರಗಿತು . ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ತರ್ ರವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾವತಿ ಯವರು  ಸ್ವಾಗತಿಸಿ , ಶಿಕ್ಷಕ  ಪ್ರಶಾಂತ್ ರೈ ಯವರು  ವಂದಿಸಿದರು . ಕಲೋತ್ಸವದ ಕನ್ವೀನರ್  ಸುದಾಮ ಮಾಸ್ತರ್  ರವರು  ಕಾರ್ಯಕ್ರಮವನ್ನು  ನಿರೂಪಿಸಿದರು . ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು ಆರಂಭ ಗೊಂಡಿತು ..........