FIRST TERM EXAMINATION WILL BE STARTING FROM 21ST OF THIS MONTH.......

Tuesday 16 January 2018

                ಶ್ರದ್ದ- 'ಹಿರಿಮೆಗೊಂದು ಮೆಟ್ಟಿಲು' ಏಕ ದಿನ ವಿಜ್ಞಾನ ಶಿಬಿರ 
                               ಯಸ್ ಎಂ ಎಂ ಎ ಯು ಪಿ ಶಾಲೆ ಮುಂಡಿತ್ತಡ್ಕ  -11356

       ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ಕಲಿಕಾ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳನ್ನು ಲಕ್ಷ್ಯವಾಗಿಟ್ಟು ಜಾರಿಗೊಳಿಸಿರುವ ಶ್ರದ್ದ- ಹಿರಿಮೆಗೊಂದು  ಮೆಟ್ಟಿಲು ಕಾರ್ಯಕ್ರಮದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಏಕ ದಿನ ಶಿಬಿರವು ತಾ:22/12/2017ರಂದು ನಮ್ಮ ಶಾಲೆಯಲ್ಲಿ ನಡೆಯಿತು.
    ಶಿಬಿರದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾರಾದ ಶ್ರೀ ಗಣೇಶ ಕಾಮತ್ ರವರು ನೆರವೇರಿಸಿ 'ಪ್ರಕೃತಿಯ ನಿರೀಕ್ಷಣೆಯಿಂದಲೇ ನಮಗೆ  ವೈಜ್ಞಾನಿಕವಾಗಿ ವಿಶ್ಲೇಷಿಸಿ ನಿಗಮನಕ್ಕೆ ತಲುಪುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಸಾಧ್ಯ ' ಎಂದು ತಿಳಿಸಿದರು.
   ನಂತರ ಅಧ್ಯಾಪಕರಾದ ಪದ್ಮನಾಭ ನಾಯಕ್ ಮತ್ತು ವಿಜಯಕುಮಾರನ್ ಕೆ ವಿ ಅವರು ಆಟಗಳ ಮೂಲಕ ವಿವಿಧ ವಿಜ್ಞಾನ ಚಟುವಟಿಕೆಗಳನ್ನು ನಡೆಸಿದರು. ಕಲಿಕೆಯಲ್ಲಿ ಹಿಂದುಳಿದ 5ನೆಯ ತರಗತಿಯ 26ಮಕ್ಕಳು ಚಟುವಟಿಕೆಯಲ್ಲಿ ಭಾಗವಹಿಸಿದರು. ವಿವಿಧ ಹಣ್ಣುಗಳನ್ನು ಬಟ್ಟೆಯ ಚೀಲದಲ್ಲಿ ಕಟ್ಟಿ ಚೀಲಗಳನ್ನು ಮುಟ್ಟಿ ನೋಡಿ ,ಮೂಸಿ ನೋಡಿ, ತೆರೆದು ರುಚಿ ನೋಡಿ ಪತ್ತೆ ಹಚ್ಚುವ ಚಟುವಟಿಕೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
   ಮಧ್ಯಾಹ್ನ  ನಂತರ ಮಕ್ಕಳು ತಮಗೆ ಲಭಿಸಿದ ಹಣ್ಣುಗಳ ಕುರಿತು ವಿವರಣೆ ನೀಡುವುದು, ಚಿತ್ರ ಬಿಡಿಸಿ ಹೆಸರು ಬರೆಯುವುದು, ಪದಸೂರ್ಯ ರಚಿಸುವುದು ಮೊದಲಾದ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದರು . ಮಕ್ಕಳು ತಮ್ಮ ಅನುಭವಗಳನ್ನು ಪುಸ್ತಕದಲ್ಲಿ ದಾಖಲಿಸಿದರು. ಅಧ್ಯಾಪಿಕೆಯರಾದ ಸಾವಿತ್ರಿ ಪಿ ವಿ ಎಂ,ಉಷಾ ವಿ ವಿ ,ಗಂಗಾ ನೀರಜ್ ,ರುಗ್ಮಿನಿ ಮತ್ತು ಅಧ್ಯಾಪಕರಾದ ಪದ್ಮನಾಭ ನಾಯಕ್ ಮತ್ತು ಪ್ರಶಾಂತ್ ರೈ ಯವರು ಚಟುವಟಿಕೆಗಳನ್ನು ನಡೆಸಲು ಸಹಕರಿಸಿದರು.



No comments:

Post a Comment