FIRST TERM EXAMINATION WILL BE STARTING FROM 21ST OF THIS MONTH.......

Monday 13 July 2015

ಮುಂಡಿತ್ತಡ್ಕ  ಶಾಲೆಯಲ್ಲಿ    ಸಂಸ್ಥಾಪಕರ   ಸಂಸ್ಮರಣಾ   ದಿನಾಚರಣೆ 

 

 

ಮುಂಡಿತ್ತಡ್ಕ  :   ಶಾಲಾ  ಸಂಸ್ಥಾಪಕರಾದ  ದಿವಂಗತ  ಶ್ರೀ   ಮಂಜಯ್ಯ  ಮಾಸ್ತರರ  44 ನೇ   ಸಂಸ್ಮರಣಾ  ದಿನವನ್ನು ಯಸ್ .ಯಂ . ಯಂ . ಎ . ಯು . ಪಿ . ಶಾಲೆಯಲ್ಲಿ  ಆಚರಿಸಲಾಯಿತು .  ಕಾರ್ಯಕ್ರಮವನ್ನು  ದೀಪ  ಬೆಳಗಿಸಿ ಉದ್ಘಾಟಿಸಿದ  ಕುಂಬಳೆ  ಉಪಜಿಲ್ಲಾ  ಶಿಕ್ಷಣಾಧಿಕಾರಿ   ಶ್ರೀಯುತ  ಕೈಲಾಸಮೂರ್ತಿಯವರು,   ಶ್ರೀ  ಮಂಜಯ್ಯ  ಮಾಸ್ತರರು " ಗ್ರಾಮೀಣ ಪ್ರದೇಶದ ಜನರ ಏಳ್ಗೆಗೆ ಕಾರಣವಾದ ಒಬ್ಬ ಮಹಾನ್ ವ್ಯಕ್ತಿ ಅವರನ್ನು ನೆನಪಿಸಿಕೊಳ್ಳುವುದು ಅವರ ಆದರ್ಶವನ್ನು ಪಾಲಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ"ಎಂದರು .


              ಅನುಸ್ಮರಣಾ ಮಾತುಗಳನ್ನಾಡಿದ ಶಾಲಾ ವ್ಯವಸ್ಥಾಪಕ  ಶ್ರೀಯುತ ಜನಾರ್ದನ ಮಾಸ್ತರ್  "ಶ್ರೀ ಮಂಜಯ್ಯ ಮಾಸ್ತರರು ಒಬ್ಬ ಧೀಮಂತ ವ್ಯಕ್ತಿ . ಅತ್ಯಂತ ಹಿಂದುಳಿದ ಈ ಗ್ರಾಮೀಣ ಪ್ರದೇಶದ ಜನರಿಗೆ ಅಕ್ಷರ ಜ್ಞಾನವನ್ನು ಕೊಡಿಸಲು ವಿದ್ಯಾಸಂಸ್ಥೆ  ಪ್ರಾರಂಭಿಸಿದ ಮಹಾನ್ ವ್ಯಕ್ತಿ "ಎಂದರು . ಪಿ ಟಿ ಎ . ಅಧ್ಯಕ್ಷ  ಸಂತೋಷ್ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು . ನಿವೃತ್ತ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ವಿಜಯಲಕ್ಷ್ಮಿ ಟೀಚರ್ ,ಕಮಲಾಕ್ಷಿ ಟೀಚರ್ , ಅಪ್ಪಣ್ಣ ಮಾಸ್ಟರ್ , ಉದಯಭಾನು ಮಾಸ್ಟರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು . 

              ಶ್ರೀ ಮಂಜಯ್ಯ ಮಾಸ್ತರರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು . ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಟೀಚರ್ ಸ್ವಾಗತಿಸಿ , ಅಧ್ಯಾಪಕ ವಿಜಯಕುಮಾರನ್ ವಂದಿಸಿದರು , ಶಿಕ್ಷಕ ಉಮಾನಾಥ ಭಂಡಾರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು . ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿಯನ್ನು ವಿತರಿಸಲಾಯಿತು . 
























No comments:

Post a Comment